ಗುರುವಾರ , ಆಗಸ್ಟ್ 13, 2020
28 °C

ಸ್ಮಶಾನ: ನಗರದ ಹೊರವಲಯದಲ್ಲಿ 10 ಕಡೆ ಜಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಹೊರವಲಯಗಳಲ್ಲಿ ಸ್ಮಶಾನಗಳಿಗೆ 10 ಕಡೆ ಒಟ್ಟು 35 ಎಕರೆ 18 ಗುಂಟೆ ಸರ್ಕಾರಿ ಜಾಗವನ್ನು ನಗರ ಜಿಲ್ಲಾಡಳಿತ ಗುರುತಿಸಿದೆ. ‌

‘ತಹಶೀಲ್ದಾರ್‌ಗಳು ಸ್ಮಶಾನಕ್ಕೆ ಗುರುತಿಸಿದ ಜಾಗಗಳ ಸರ್ವೆ ನಂಬರ್‌ ಪ್ರಕಾರ ಪ್ರತ್ಯೇಕ ಪ್ರಸ್ತಾವನೆ ಸಿದ್ಧಪಡಿಸಿ ಅನುಮೋದನೆ ಪಡೆಯಬೇಕು. ಈ ಜಾಗಗಳ ಗಡಿ ಗುರುತು ಮಾಡಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಹಸ್ತಾಂತರಿಸಬೇಕು. ಈ ಜಾಗಗಳು ಒತ್ತುವರಿ ಆಗದಂತೆ ತಡೆಯಲು ಕಂದಾಯ ಅಧಿಕಾರಿಗಳು ತಂತಿ ಬೇಲಿ ಹಾಕಿಸಬೇಕು’ ಎಂದು ನಗರ ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ ಆದೇಶ ಮಾಡಿದ್ದಾರೆ.

ನಗರದಲ್ಲಿರುವ ಸ್ಮಶಾನಗಳಲ್ಲಿ ಮೃತದೇಹಗಳ ಅಂತ್ಯಸಂಸ್ಕಾರ ಮಾಡಲು ಸ್ಥಳಾವಕಾಶದ ಕೊರತೆ ಎದುರಾಗಿತ್ತು. ನಗರದ ಹೊರವಲಯಗಳಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು