ಗುರುವಾರ , ಏಪ್ರಿಲ್ 9, 2020
19 °C

ಜಲಮಂಡಳಿಯಲ್ಲಿ ಮಹಿಳಾ ದಿನ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಸೋಮವಾರ ವಿಶ್ವ ಮಹಿಳಾ ದಿನ ಆಚರಿಸಲಾಯಿತು. 

ಮಕ್ಕಳ ಹೃದ್ರೋಗ ತಜ್ಞರಾದ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ‘ಹೆಣ್ಣು ಸಹನಾಮೂರ್ತಿ. ಹುಟ್ಟಿನಿಂದ ಮುಪ್ಪಿನವರೆಗೂ ಮಹಿಳೆಯೇ ಪೋಷಕಿ
ಯಾಗಿರುತ್ತಾಳೆ. ಮಹಿಳೆಯರ ಸ್ವಾಸ್ಥ್ಯವೇ ಸಮಾಜದ ಸ್ವಾಸ್ಥ್ಯ’ ಎಂದರು. 

ಮಹಿಳೆಯರ ಮೇಲಿನ ದೌರ್ಜನ್ಯ ವಿರುದ್ಧ ಅರಿವು ಮೂಡಿಸುವ ನಿಟ್ಟಿನಲ್ಲಿ ಮಂಡಳಿಯ ಪಶ್ಚಿಮ ವಿಭಾಗದ ಮಹಿಳಾ ಸಿಬ್ಬಂದಿ ಕಿರುನಾಟಕ ಪ್ರದರ್ಶಿಸಿದರು. ಸಂಧ್ಯಾ ಶೆಣೈ, ‘ಹಾಸ್ಯದೊಂದಿಗೆ ಸರಳ ಜೀವನ’ ಕುರಿತು ಉಪನ್ಯಾಸ ನೀಡಿದರು. ಚಿತ್ರನಟಿ ಚೈತ್ರಾ ರಾವ್ ಮಾತನಾಡಿದರು. ‘ಬೆಳಕು’ ಅಂಧಮಕ್ಕಳ ಅಕಾಡೆಮಿ ಅಧ್ಯಕ್ಷೆ ಅಶ್ವಿನಿ ಅಂಗಡಿಯವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು