ಮಂಗಳವಾರ, ಆಗಸ್ಟ್ 3, 2021
23 °C

ಲಾಕ್‌ಡೌನ್‌ ವೇಳೆ ಸಂಚಾರ: ಸವಾರರಿಗೆ ಬೈರತಿ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪುರ: ಲಾಕ್‌ಡೌನ್ ಆದೇಶ ಉಲ್ಲಂಘಿಸಿ ರಸ್ತೆಯಲ್ಲಿ ಅನಗತ್ಯವಾಗಿ ಓಡಾಡಿದ ವಾಹನ ಸವಾರರಿಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಎಚ್ಚರಿಕೆ ನೀಡಿದರು.

ಟಿನ್ ಫ್ಯಾಕ್ಟರಿ ಬಳಿಯ ಲೌರಿ ಮೆಮೋರಿಯಲ್ ಶಾಲಾ ಆವರಣದಲ್ಲಿ ಮಹದೇವಪುರ ವಲಯದ ಕೋವಿಡ್  ಚಲನವಲನಗಳ ಕಮಾಂಡ್ ಸೆಂಟರ್ ಉದ್ಘಾಟಿಸಿ ಬರುವ ವೇಳೆ ಸವಾರರನ್ನು ಗಮನಿಸಿದ ಅವರು ರಸ್ತೆಗಿಳಿದು ವಾಹನಗಳ ತಪಾಸಣೆ ನಡೆಸಿದರು.

‘ನಿಮಗೆ ಜೀವದ ಭಯ ಇಲ್ಲವೇ? ಅನಗತ್ಯವಾಗಿ ರಸ್ತೆಗೆ ಏಕೆ ಬರುತ್ತಿರಾ?’ ಎಂದು ಸವಾರರನ್ನು ತರಾಟೆಗೆ ತೆಗೆದು
ಕೊಂಡರು. ಅನಗತ್ಯವಾಗಿ ಓಡಾಡುವ ವಾಹನ ಸವಾರರಿಗೆ ದಂಡ ವಿಧಿಸಬೇಕು ಹಾಗೂ ವಾಹನಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಬೇಕು’ ಎಂದು ಪೊಲೀಸರಿಗೆ ಸೂಚನೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು