ಬೆಂಗಳೂರು: ಕೆನರಾ ಬ್ಯಾಂಕ್ ಸೆ.19ರಿಂದ 21ರವರೆಗೆ ನಗರದ ಎಂ.ಜಿ.ರಸ್ತೆಯ ರಂಗೋಲಿ ಮೆಟ್ರೊ ಆರ್ಟ್ ಸೆಂಟರ್ನಲ್ಲಿ ಕೆನರಾ ಉತ್ಸವವನ್ನು ಹಮ್ಮಿಕೊಂಡಿದೆ.

ಉತ್ಸವದಲ್ಲಿ ಮಹಿಳಾ ಸ್ವಸಹಾಯ ಸಂಘಗಳು, ಗ್ರಾಮೀಣ ಉದ್ಯಮಿಗಳು ಮತ್ತು ಸ್ಥಳೀಯ ಕರಕುಶಲ ಕಲಾವಿದರು ತಯಾರಿಸಿದ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ ನಡೆಯಲಿದೆ.

70 ಮಹಿಳಾ ಉದ್ಯಮಿಗಳು ಭಾಗವಹಿಸಲಿರುವ ಈ ಉತ್ಸವದಲ್ಲಿ ಸಿದ್ಧಪಡಿಸಿದ ಉಡುಪುಗಳು, ಗೃಹ ಅಲಂಕಾರ, ಟೆರಾಕೋಟ, ಕರಕುಶಲ, ಕೃತಕ ಆಭರಣ, ಪ್ರಸಾದನ ಇತ್ಯಾದಿ ಉತ್ಪನ್ನಗಳು ಒಂದೇ ಸೂರಿನಡಿಯಲ್ಲಿ ಲಭ್ಯವಾಗಲಿವೆ.

‘ಮಹಿಳಾ ಸಬಲೀಕರಣ, ಉದ್ಯಮಶೀಲತೆ ಹಾಗೂ ಸಾಂಸ್ಕೃತಿಕ ಪರಂಪರೆ ಉತ್ತೇಜಿಸಲು ಕೆನರಾ ಬ್ಯಾಂಕ್ ತನ್ನ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಉತ್ಸವ ಆಯೋಜಿಸುತ್ತಿದೆ. ಪ್ರದರ್ಶನವು ಮಹಿಳಾ ಉದ್ಯಮಿಗಳ ಜೀವನೋಪಾಯವನ್ನು ಬೆಂಬಲಿಸಿ ತಳಮಟ್ಟದಲ್ಲಿ ಉದ್ಯಮಶೀಲ ವ್ಯವಸ್ಥೆಯನ್ನು ಬಲಪಡಿಸುತ್ತದೆ ́ ಎಂದು ಕೆನರಾ ಬ್ಯಾಂಕ್ ವೃತ್ತ ಕಚೇರಿಯ ಮುಖ್ಯ ಮಹಾಪ್ರಬಂಧಕ ಮಹೇಶ್ ಪೈ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.