ಭಾನುವಾರ, 11 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು ಯಾಕ್ರೀ ಟೋಯಿಂಗ್‌ ಮಾಡ್ತಿದ್ದೀರಾ: ಪೊಲೀಸರಿಗೇ ಗದರಿದ ಮಹಿಳೆ

Last Updated 9 ಸೆಪ್ಟೆಂಬರ್ 2021, 4:38 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾರು ನನ್ನದು. ಯಾಕ್ರೀ ಟೋಯಿಂಗ್‌ ಮಾಡ್ತಿದ್ದೀರಾ’...

ಮಹಿಳೆಯೊಬ್ಬರು ಸಂಚಾರ ಪೊಲೀಸರಿಗೆ ಬುಧವಾರ ಗದರಿದ್ದು ಹೀಗೆ..

ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಏರ್‌ಟೆಲ್‌ ಮಳಿಗೆಗೆ ಬಂದಿದ್ದ ಮಹಿಳೆ ಕಾರನ್ನು ‘ನೋ ಪಾರ್ಕಿಂಗ್‌’ ಸ್ಥಳದಲ್ಲಿ ನಿಲ್ಲಿಸಿದ್ದರು. ಹೀಗಾಗಿ ಸಂಚಾರ ಪೊಲೀಸರು ಟೋಯಿಂಗ್‌ ಮಾಡಲು ಮುಂದಾದರು. ಇದರಿಂದ ಕೆರಳಿದ ಮಹಿಳೆ ಟೋಯಿಂಗ್‌ ವಾಹನ ಏರಿ ಗಲಾಟೆ ಮಾಡಿದರು.

‘ಟೋಯಿಂಗ್‌ ಮಾಡುವ ಮುನ್ನ ಪೊಲೀಸರು ವಾಹನ ಸಂಖ್ಯೆಯನ್ನು ಕೂಗಬೇಕಿತ್ತು. ಕಾರಿನ ಮಾಲೀಕರು ಯಾರು ಎಂಬುದನ್ನೂ ಕೇಳಬೇಕಿತ್ತು. ಈ ಕೆಲಸವನ್ನು ಮಾಡಿಲ್ಲ. ಕೆಲಸದ ಮೇಲೆ ಏರ್‌ಟೆಲ್‌ ಕಚೇರಿಗೆ ಬಂದಿದ್ದೇನೆ. ಒಂದು ಗಂಟೆಯವರೆಗೂ ಇಲ್ಲಿ ಕಾಯಬೇಕು. ಅಲ್ಲಿಯವರೆಗೂ ಕಾರು ನಿಲ್ಲಿಸುವುದು ಎಲ್ಲಿ’ ಎಂದು ಮಹಿಳೆ ಪ್ರಶ್ನಿಸಿದರು.

‘ನೋ ಪಾರ್ಕಿಂಗ್‌ ಸ್ಥಳದಲ್ಲಿ ಕಾರು ನಿಲ್ಲಿಸಿದ್ದಕ್ಕೆ ವಿಧಿಸಿರುವ ದಂಡವನ್ನು ಪಾವತಿಸಿ. ನಾವು ವಾಹನ ಬಿಟ್ಟು ಹೋಗುತ್ತೇವೆ’ ಎಂದು ಪೊಲೀಸರು ತಿಳಿಸಿದರು.

‘ಎಷ್ಟು ಕೊಡಬೇಕು ಎಂದು ಮಹಿಳೆ ಕೇಳಿದಾಗ, ₹500 ಅಥವಾ ₹1,000 ಆಗಬಹುದು ಎಂದು ಸಿಬ್ಬಂದಿ ಹೇಳಿದರು. ನಾನ್ಯಾಕೆ ಕೊಡಲಿ, ಏರ್‌ಟೆಲ್‌ ಕಂಪನಿಯವರನ್ನು ಕೇಳಿ’ ಎಂದು ತಗಾದೆ ತೆಗೆದರು.

ಪೊಲೀಸರು ಮತ್ತು ಮಹಿಳೆಯ ಜಟಾಪಟಿಯನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT