ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾಬಸ್‌ಪೇಟೆ | ಕೆಂಪೇಗೌಡ ಜಯಂತಿ ಆಚರಣೆ

Published 27 ಜೂನ್ 2024, 16:31 IST
Last Updated 27 ಜೂನ್ 2024, 16:31 IST
ಅಕ್ಷರ ಗಾತ್ರ

ದಾಬಸ್‌ಪೇಟೆ: ಕೆಂಪೇಗೌಡರು ದಕ್ಷಿಣ ಭಾರತದ ಸಾಂಸ್ಕೃತಿಕ ನಾಯಕರು ಎಂದು ರಾಜ್ಯ ಒಕ್ಕಲಿಗರ ಜಾಗೃತಿ ಸಂಘದ ಅಧ್ಯಕ್ಷ ಗಂಗರುದ್ರಯ್ಯ ತಿಳಿಸಿದರು.

ದಾಬಸ್ ಪೇಟೆ ಪಟ್ಟಣದ ಶಿವಗಂಗೆ ರಸ್ತೆಯ ಕೆಂಪೇಗೌಡ ವೃತ್ತದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಒಕ್ಕಲಿಗ ನಾಯಕ ಬಿ.ಎಂ. ಮೋಹನ್ ಕುಮಾರ ಮಾತನಾಡಿ, ‘ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯುಳ್ಳ ಆಡಳಿತಗಾರನಾಗಿದ್ದು, ಕೆರೆಗಳ ನಿರ್ಮಾಣಗಳ ಮೂಲಕ ಕೃಷಿ ಅಭಿವೃದ್ಧಿ ಹಾಗೂ ಅಂತರ್ಜಲದ ವೃದ್ಧಿಗೆ ಶ್ರಮಿಸಿದವರು. ಪ್ರಕೃತಿ ಸಮತೋಲನ, ನಿಸರ್ಗ ಸಂರಕ್ಷಣೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು’ ಎಂದು ಹೇಳಿದರು. 

ಕಾರ್ಯಾಧ್ಯಕ್ಷ ಬಿ.ಎನ್. ಮನೋಹರ್, ಎಸ್.ಟಿ. ಸಿದ್ದರಾಜು, ಬಿ.ಪಿ. ಶ್ರೀನಿವಾಸಮೂರ್ತಿ, ಬಿ.ಎಂ. ಶ್ರೀನಿವಾಸ, ನಾಗರಾಜು, ತಿಮ್ಮರಾಜು, ಹನುಮಂತರಾಜು, ಬಿ.ಮಂಜುನಾಥ, ದೇವರಾಜು, ನರಸಿಂಹಮೂರ್ತಿ, ಮಧುಸೂದನ್, ತಿಮ್ಮೆಗೌಡ, ನಾಗವವೇಣಿ, ರಾಘವೇಂದ್ರ, ನಳಿನಾ, ಶಿವರಾಮಯ್ಯ, ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT