ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಯ್ಯ-ದೊಡ್ಡಯ್ಯ ಪೂಜಾ ಮಹೋತ್ಸವ

Published 2 ಫೆಬ್ರುವರಿ 2024, 16:24 IST
Last Updated 2 ಫೆಬ್ರುವರಿ 2024, 16:24 IST
ಅಕ್ಷರ ಗಾತ್ರ

ಬೆಂಗಳೂರು: ಸನಾತನ ಧರ್ಮದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೂಡಲಿ-ಶೃಂಗೇರಿ ಸಂಸ್ಥಾನದ ಅಭಿನವ ಶಂಕರ ಭಾರತಿ ಸ್ವಾಮೀಜಿ ಹೇಳಿದರು.

ಚಾಮರಾಜಪೇಟೆಯ ಚಂದ್ರಶೇಖರ ಭಾರತೀಯ ಕಲ್ಯಾಣಮಂಟಪದಲ್ಲಿ ಮೈಲಾರಲಿಂಗೇಶ್ವರ ಟ್ರಸ್ಟ್ ಆಯೋಜಿಸಿದ್ದ 21ನೇ ವರ್ಷದ ಚಿಕ್ಕಯ್ಯ-ದೊಡ್ಡಯ್ಯ ಪೂಜಾ ಮಹೋತ್ಸವ, ಮೈಲಾರಿ ಹೋಮ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಭಕ್ತಿ ಮಾರ್ಗದಲ್ಲಿ ಸಾಗುವ ಮೂಲಕ ಸಂಸ್ಕೃತಿ, ಆಚಾರ, ವಿಚಾರಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.

ಆನಂದವನ ಅಗಡಿ ಕ್ಷೇತ್ರದ ಗುರುದತ್ತ ಸ್ವಾಮೀಜಿ ಚಕ್ರವರ್ತಿ ಮಾತನಾಡಿ, ‘ಬೆಂಗಳೂರಿನಲ್ಲಿ ಭವ್ಯವಾದ ಮೈಲಾರಲಿಂಗೇಶ್ವರ ದೇವಸ್ಥಾನ ನಿರ್ಮಾಣವಾಗಬೇಕು. ಅದು ಸುಕ್ಷೇತ್ರವಾಗಬೇಕು. ಈ ನಿಟ್ಟಿನಲ್ಲಿ ಭಕ್ತರು ದೃಢ  ಹೆಜ್ಜೆ ಇಡಬೇಕು’ ಎಂದು ಹೇಳಿದರು.

ವಿದ್ಯಾವಿಶ್ವೇಶ್ವರ ಭಾರತಿ ಸ್ವಾಮೀಜಿ, ಬ್ರಹ್ಮಾನಂದತೀರ್ಥ ಸ್ವಾಮೀಜಿ, ದತ್ತಾವಧೂತ ಮಹಾರಾಜ, ಶಾಸಕರಾದ ರವಿಸುಬ್ರಹ್ಮಣ್ಯ, ಸಿ.ಕೆ. ರಾಮಮೂರ್ತಿ, ಸಂಸದ ತೇಜಸ್ವಿ ಸೂರ್ಯ, ಅದಮ್ಯ ಚೇತನ ಟ್ರಸ್ಟ್ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT