ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಅಶ್ಲೀಲ ವಿಡಿಯೊ: ಮಹಿಳೆಗಾಗಿ ಪೊಲೀಸರ ಹುಡುಕಾಟ

Published 21 ನವೆಂಬರ್ 2023, 15:51 IST
Last Updated 21 ನವೆಂಬರ್ 2023, 15:51 IST
ಅಕ್ಷರ ಗಾತ್ರ

ಬೆಂಗಳೂರು: ಮಕ್ಕಳ ಅಶ್ಲೀಲ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿರುವ ಆರೋಪದಡಿ ನಗರದ ಮಹಿಳೆಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಮಹಿಳೆಯ ಪತ್ತೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

‘ಬಿಟಿಎಂ ಮೊದಲ ಹಂತದ ನಿವಾಸಿ ಎನ್ನಲಾದ 40 ವರ್ಷದ ಮಹಿಳೆ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆದರೆ, ಸದ್ಯಕ್ಕೆ ಅವರು ತಮ್ಮ ವಿಳಾಸದಲ್ಲಿ ಇಲ್ಲ. ಅವರನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆ ಹೊಂದಿರುವ ಮಹಿಳೆ, ಮಕ್ಕಳ ಅಶ್ಲೀಲ ವಿಡಿಯೊಗಳನ್ನು ಅಪ್‌ಲೋಡ್ ಮಾಡಿದ್ದರು. ಇದೇ ವಿಡಿಯೊವನ್ನು ಹಲವರು ವೀಕ್ಷಿಸಿದ್ದಾರೆ. ಇಂಥ ವಿಡಿಯೊ ಅಪ್‌ಲೋಡ್ ಮಾಡುವುದು ಹಾಗೂ ನೋಡುವುದು ಅಪರಾಧ’ ಎಂದು ಮೂಲಗಳು ತಿಳಿಸಿವೆ.

ಪುರಾವೆ ನೀಡಿರುವ ಎನ್‌ಸಿಆರ್‌ಬಿ: ‘ಮಹಿಳೆಯ ಕೃತ್ಯವನ್ನು ಪತ್ತೆ ಮಾಡಿದ್ದ ಎನ್‌ಸಿಆರ್‌ಬಿ (ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ), ಐ.ಪಿ ವಿಳಾಸ ಸಮೇತ ಪುರಾವೆಗಳನ್ನು ನೀಡಿದೆ. ಅದೇ ಮಾಹಿತಿ ಆಧರಿಸಿ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಹಿಳೆ ವಿಡಿಯೊ ಅಪ್‌ಲೋಡ್ ಮಾಡಲು ಕಾರಣವೇನು? ಅವರ ಉದ್ದೇಶವೇನು ? ಮಹಿಳೆಯ ಹೆಸರಿನಲ್ಲಿ ಬೇರೆ ಯಾರಾದರೂ ವಿಡಿಯೊ ಅಪ್‌ಲೋಡ್ ಮಾಡಿದ್ದಾರೆಯೇ ? ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಮೂಲಗಳು ವಿವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT