ಮಂಗಳವಾರ, ಆಗಸ್ಟ್ 16, 2022
29 °C

ಗರುಡ ಮಾಲ್‌ನಲ್ಲಿ ‘ಮಿಡೀವಲ್ ಕ್ಯಾಸಲ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಗರುಡ ಮಾಲ್‌ನಲ್ಲಿ ಕ್ರಿಸ್‌ಮಸ್‌ ಮತ್ತು ಹೊಸ ವರ್ಷ ಆಚರಣೆ ಪ್ರಯುಕ್ತ 10 ದಿನಗಳ ಕೇಕ್‌ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಮಧ್ಯಯುಗದ ಕೋಟೆಯನ್ನು ಪ್ರತಿಬಿಂಬಿಸುವ ‘ಮಿಡೀವಲ್ ಕ್ಯಾಸಲ್’ ಕೇಕ್ ಈ ವರ್ಷದ ಪ್ರದರ್ಶನದ ಪ್ರಮುಖ ಆಕರ್ಷಣೆ. ಕೇಕ್‌ನಲ್ಲಿ ನಿರ್ಮಿಸಿರುವ ಈ ಕಲಾಕೃತಿಯು 20 ಅಡಿ ಎತ್ತರ, 16X16 ಅಡಿ ವಿಸ್ತೀರ್ಣ, 800 ಕೆ.ಜಿ ತೂಕವಿದೆ. ಒಟ್ಟು 12 ಬಾಣಸಿಗರು ಸೇರಿ ಇದನ್ನು ತಯಾರಿಸಿದ್ದಾರೆ. ಇದಲ್ಲದೇ, 6 ಅಡಿ ಎತ್ತರದ ಸಾಂತಾ ಕ್ಲಾಸ್‌, 7 ಅಡಿ ಎತ್ತರದ 4 ಕೋಟೆ ಬುರುಜುಗಳ ಪ್ರತಿಕೃತಿ ಕೇಕ್‌ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಸಿನಿಮಾ ನಟಿ ರಾಧಿಕಾ ನಾರಾಯಣ್ ಅವರು ಕೇಕ್‌ ಪ್ರದರ್ಶನವನ್ನು ಬುಧವಾರ ಉದ್ಘಾಟಿಸಿದರು. ಪ್ರದರ್ಶನವು 2022ರ ಜ.2 ರವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಗ್ರಾಹಕರಿಗೆ ಕೇಕ್‌ಗಳನ್ನು ತಯಾರಿಸಿಕೊಡುವ ವಿಶೇಷ ಕೌಂಟರ್ ಮತ್ತು ಕ್ರಿಸ್‌ಮಸ್ ವಸ್ತುಗಳ ಸಂತೆಯನ್ನೂ ಏರ್ಪಡಿಸಲಾಗಿದೆ ಎಂದು ಆಯೋಜಕ ನರೇಂದ್ರ ಭಾಟಿಯಾ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು