ಶನಿವಾರ, ಆಗಸ್ಟ್ 8, 2020
28 °C

ಬೂತ್‌ ಮಟ್ಟದಲ್ಲಿ ನಾಗರಿಕ ಕಾರ್ಯಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೋಮ್ ಕ್ವಾರಂಟೈನ್‌ನಲ್ಲಿ ಇರುವವರ ಮೇಲೆ ನಿಗಾ ಇಡಲು ಪ್ರತಿ ಬೂತ್ ಮಟ್ಟದಲ್ಲಿ ನಾಗರಿಕರನ್ನು ಒಳಗೊಂಡ ಕಾರ್ಯಪಡೆ ರಚಿಸಲು ಸರ್ಕಾರ ಮುಂದಾಗಿದೆ.

300ರಿಂದ 400 ಮನೆಗಳನ್ನು ಸೇರಿಸಿ ಒಂದು ಬೂತ್ ಎಂದು ಗುರುತಿಸಲಾಗುವುದು. ಅಲ್ಲಿಗೆ ಒಬ್ಬರು ಬೂತ್‌ ಮಟ್ಟದ ಅಧಿಕಾರಿ ನೇಮಕಗೊಳ್ಳಲಿದ್ದಾರೆ. ಕಾರ್ಯಪಡೆಯಲ್ಲಿ ಸೇರಿಕೊಳ್ಳುವ ನಾಗರಿಕರಿಗೆ 50 ರಿಂದ 100 ಮನೆಗಳ ಜವಾಬ್ದಾರಿ  ನೀಡಲಾಗುತ್ತದೆ. ಆ ಪ್ರದೇಶದಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿರುವ ಜನರು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದರೆ ಬೂತ್ ಮಟ್ಟದ ಅಧಿಕಾರಿಗೆ ಮಾಹಿತಿ ನೀಡುವುದು ಕಾರ್ಯಪಡೆ ಸದಸ್ಯರ ಜವಾಬ್ದಾರಿ.

ಕಾರ್ಯಪಡೆಗೆ ಸೇರ್ಪಡೆಯಾಗುವ ನಾಗರಿಕರು ಸ್ವಯಂ ಪ್ರೇರಿತವಾಗಿ ನೊಂದಾಯಿಸಿಕೊಳ್ಳಲು ಆನ್‌ಲೈನ್‌ನಲ್ಲಿ ಬಿಬಿಎಂಪಿ ಅವಕಾಶ ಕಲ್ಪಿಸಿದೆ. ಶನಿವಾರ ರಾತ್ರಿವರೆಗೆ 8,924 ನಾಗರಿಕರು ನೊಂದಾಯಿಸಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು