ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5, 8ನೇ ತರಗತಿ ಪರೀಕ್ಷೆಗಳು ಸುಸೂತ್ರ

Last Updated 27 ಮಾರ್ಚ್ 2023, 20:21 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಾದ್ಯಂತ ಐದು ಮತ್ತು ಎಂಟನೇ ತರಗತಿಯ ಬೋರ್ಡ್‌ ಪರೀಕ್ಷೆಗಳು ಸೋಮವಾರ ಆಯಾ ಶಾಲೆಗಳಲ್ಲೇ ಸುಸೂತ್ರವಾಗಿ ನಡೆದವು.

ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಅನುಮತಿ ನೀಡಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೆಲ ಖಾಸಗಿ ಅನುದಾನರಹಿತ ಶಾಲೆಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್‌ ಬೆಳಿಗ್ಗೆಯಷ್ಟೇ ವಜಾಗೊಳಿಸಿತ್ತು. ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದ ಕಾರಣ ನಿಗದಿಯಂತೆ ವೇಳಾಪಟ್ಟಿಯ ಪ್ರಕಾರ ಮಧ್ಯಾಹ್ನ 2.30ಕ್ಕೆ ಪರೀಕ್ಷೆಗಳು ಆರಂಭವಾದವು.

ಪಠ್ಯಕ್ರಮದ ಹೊರತಾದ ಪ್ರಶ್ನೆಗಳಿವೆ ಎಂದು ಕೆಲವೆಡೆ ಗೊಂದಲ ಸೃಷ್ಟಿಯಾಗಿತ್ತು. ವಿಶ್ಲೇಷಣಾತ್ಮಕ ಸೇರಿದಂತೆ ಎಲ್ಲ ಪ್ರಶ್ನೆಗಳನ್ನೂ ಪಠ್ಯದಿಂದಲೇ ಕೇಳಲಾಗಿದೆ. ಗೊಂದಲ ಅನಗತ್ಯ ಎಂದು ಬಹುತೇಕ ಶಾಲೆಗಳ ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳಿದರು.

ಮೊದಲ ದಿನ ಪ್ರಥಮ ಭಾಷೆಯ ಪರೀಕ್ಷೆಗಳು (40 ಅಂಕಗಳು) ನಡೆದವು. 56,157 ಶಾಲೆಗಳಿಂದ ಐದನೇ ತರಗತಿಯ 9,59,734 ವಿದ್ಯಾರ್ಥಿಗಳು, 22,639 ಶಾಲೆಗಳಿಂದ ಎಂಟನೇ ತರಗತಿಯ 9,43,919 ವಿದ್ಯಾರ್ಥಿಗಳು ಮೊದಲ ದಿನದ ಪರೀಕ್ಷೆ ಬರೆದಿದ್ದಾರೆ ಎಂದು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಳಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT