ಶನಿವಾರ, ಜುಲೈ 31, 2021
26 °C

ಸ್ವಚ್ಛತಾ ಆಂದೋಲನ: ವಿಜೇತರ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸ್ವಚ್ಛತೆ ಕುರಿತು ಜನರಲ್ಲಿ ಅರಿವು ಮೂಡಿಸಲು ಹಮ್ಮಿಕೊಂಡಿರುವ ಹದಿನೈದು ದಿನಗಳ ‘ಸ್ವಚ್ಛತಾ ಪಖವಾಡಾ’ ಅಂಗವಾಗಿ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ನ (ಐಒಸಿಎಲ್‌) ರಾಜ್ಯ ಘಟಕದ ವತಿಯಿಂದ ಆನ್‌ಲೈನ್‌ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಗಳ ವಿಜೇತರಾದವರ ಪಟ್ಟಿಯನ್ನು ಗುರುವಾರ ಪ್ರಕಟಿಸಿದೆ. 

ಸ್ವಚ್ಛತಾ ಅರಿವು ಮೂಡಿಸುವ ಭಿತ್ತಿಪತ್ರಗಳು, ಪೋಸ್ಟರ್‌ಗಳ ರಚನೆ, ಚಿತ್ರಕಲಾ ಸ್ಪರ್ಧೆಯನ್ನು ಕಿರಿಯ ಮತ್ತು ಹಿರಿಯ ವಿಭಾಗದವರಿಗೆ ನಡೆಸಲಾಗಿತ್ತು. 

ಕಲಾ ಮತ್ತು ಪೋಸ್ಟರ್‌ ರಚನೆಯ ಕಿರಿಯ ವಿಭಾಗದಲ್ಲಿ ಡೆಕ್ಕನ್‌ ಇಂಟರ್‌ನ್ಯಾಷನಲ್‌ ಶಾಲೆಯ ಸುರವಿ ಬಾಲಾಜಿ ಮತ್ತು ಹಿರಿಯ ವಿಭಾಗದಲ್ಲಿ ಪದ್ಮನಾಭನಗರದ ಕಾರ್ಮೆಲ್‌ ಶಾಲೆಯ ಡಿ.ವಿ. ಗೌರಿ ಪ್ರಥಮ ಸ್ಥಾನ ಪಡೆದಿದ್ದಾರೆ. 

‘ಕೇವಲ ಒಂದು ನಿಮಿಷ’ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಕೊತ್ತನೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಚಾಮುಂಡಿ, ಹಿರಿಯರ ವಿಭಾಗದಲ್ಲಿ ದೂರವಾಣಿ ನಗರದ ಐಟಿಐ ಸೆಂಟ್ರಲ್‌ ಶಾಲೆಯ ಎನ್. ಚೇತನ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು