ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಮಾನ ವೈಪರೀತ್ಯದಿಂದ ಕೃಷಿಗೆ ಗಂಡಾಂತರ- ಯತಿರಾಜು

ಜನವಿಜ್ಞಾನ ಚಳವಳಿಯ ಯತಿರಾಜು ಅಭಿಮತ
Published 26 ಮೇ 2024, 18:01 IST
Last Updated 26 ಮೇ 2024, 18:01 IST
ಅಕ್ಷರ ಗಾತ್ರ

ಬೆಂಗಳೂರು: ಇಂದಿನ ಜಾಗತಿಕ ಸವಾಲುಗಳಲ್ಲಿ ಹವಾಮಾನ ವೈಪರೀತ್ಯ ಪ್ರಮುಖವಾದುದು. ಬಿಸಿ ಏರಿಕೆ ಸಹಿತ ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಯಿಂದ ಕೃಷಿಗೆ ಗಂಡಾಂತರ ಉಂಟು ಮಾಡುತ್ತಿದೆ ಎಂದು ಜನವಿಜ್ಞಾನ ಚಳವಳಿಗಾರ ಸಿ.ಯತಿರಾಜು ಆತಂಕ ವ್ಯಕ್ತಪಡಿಸಿದರು.

‘ಏಂಗೆಲ್ಸ್‌ –200’ ಮಾಲಿಕೆಯ ಅಂಗವಾಗಿ ‘ಪ್ರಕೃತಿಯ ಗತಿತಾರ್ಕಿಕತೆ‘ ಕೃತಿಯನ್ನು ಭಾನುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು. 

‘ಕಾರ್ಪೊರೇಟ್‌ ಆಧಾರಿತ ಮತ್ತು ತಂತ್ರಜ್ಞಾನ ಆಧಾರಿತ ಕೃಷಿಗೆ ನಮ್ಮ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಆದರೆ, ಈ ನೀತಿಯನ್ನು ಅಳವಡಿಸಿಕೊಂಡಿರುವ ಪಾಶ್ಚಿಮಾತ್ಯ ದೇಶಗಳಲ್ಲಿ ಕೃಷಿ ಬಿಕ್ಕಟ್ಟನ್ನು ಎದುರಿಸುತ್ತಿದೆ. ನಮ್ಮ ಕೃಷಿ ವಿಜ್ಞಾನಿಗಳು ನೀಡುತ್ತಿರುವ ಸಲಹೆಗಳು ವಿಶ್ವಾಸಕ್ಕೆ ಅರ್ಹವಾಗಿಲ್ಲ. ಹವಾಮಾನ ವೈಪರೀತ್ಯವನ್ನು ಸಮಗ್ರವಾಗಿ ನೋಡಲು ಸಾಧ್ಯವಾಗದೇ ಇರುವುದೇ ಸಮಸ್ಯೆಗೆ ಕಾರಣವಾಗಿದೆ‘ ಎಂದು ವಿಶ್ಲೇಷಿಸಿದರು.

‘ತಾಂತ್ರಿಕ ಪ್ರಗತಿಯ ಹೆಸರಲ್ಲಿ ವಿಪರೀತಕ್ಕೆ ಹೋಗುತ್ತಿದ್ದೇವೆ. ಇಂದು ಹೊಸ ತಂತ್ರಜ್ಞಾನ ಎನ್ನುವುದು ನಾಳೆಗೇ ಅಪ್ರಸ್ತುತವಾಗುತ್ತಿದೆ. ಈ ಎಲ್ಲ ಸವಾಲುಗಳಿಗೆ ಪರಿಹಾರವನ್ನು ಏಂಗೆಲ್ಸ್‌ ನೀಡಿದ್ದಾರೆ. ಪರಿಸರವನ್ನು ಸಮಗ್ರ ದೃಷ್ಟಿಕೋನದಿಂದ ವೈಜ್ಞಾನಿಕವಾಗಿ ವಿವರಿಸಿದ್ದಾರೆ. ಅದರ ಕನ್ನಡ ಅನುವಾದ ‘ಪ್ರಕೃತಿಯ ಗತಿತಾರ್ಕಿಕತೆ’ಯನ್ನು ಎಲ್ಲರೂ ಓದಿ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಲೇಖಕರಾದ ಬಿ.ಆರ್. ಮಂಜುನಾಥ್‌, ಎನ್‌.ಕೆ. ವಸಂತರಾಜ್‌, ಅನುವಾದಕ ಸುಬ್ರಮಣ್ಯ ಗುಡ್ಗೆ, ಹೋರಾಟಗಾರ್ತಿ ಕೆ.ಎಸ್‌. ವಿಮಲಾ ಮಾತನಾಡಿದರು. ರಾಜೇಂದ್ರ ಉಡುಪ, ಮಂಡ್ಯದ ಸುರೇಂದ್ರ, ಬಾಗೇಪಲ್ಲಿ ಡಾ.ಅನಿಲ್, ಖಗೋಳ ವಿಜ್ಞಾನ ಪ್ರಾಧ್ಯಾಪಕ ಸಬ್ಯಸಾಚಿ ಚಟರ್ಜಿ, ಖಗೋಳ ಭೌತಶಾಸ್ತ್ರಜ್ಞ ಪಾಲಹಳ್ಳಿ ವಿಶ್ವನಾಥ್, ಶಿಕ್ಷಣ ತಜ್ಞ ಜಿ. ರಾಮಕೃಷ್ಣ ಸಂವಾದದಲ್ಲಿ ಪಾಲ್ಗೊಂಡರು.

ವಾಹನ ಚಾಲನಾ ತರಬೇತಿಗಾಗಿ ಡ್ರೈವಿಂಗ್‌ ಸಿಮ್ಯುಲೇಟರ್‌ ಅಳವಡಿಸಲಾಗಿದ್ದು ಸದರಿ ಸಿಮ್ಯುಲೇಟರ್‌ ನಲ್ಲಿ ವಾಹನ ಚಾಲನೆಯ ನೈಜ ಅನುಭವವದೊಂದಿಗೆ ಚಾಲನಾ ಕಲಿಕೆಯನ್ನು ಅಭ್ಯಾಸ ಮಾಡಲಾಗುತ್ತದೆ. ಇದರಲ್ಲಿ ನಗರ ಪ್ರದೇಶ ಸಂಚಾರ ದಟ್ಟಣೆ ಇರುವ ರಸ್ತೆಗಳು ಗುಡ್ಡಗಾಡು ಪ್ರದೇಶದ ರಸ್ತೆಗಳು ಇಕ್ಕಟ್ಟಾದ ನಗರ ಪ್ರದೇಶದ ರಸ್ತೆಗಳು ಹಾಗೂ ವಿವಿಧ ರೀತಿಯ ರಸ್ತೆಯ ಸಂದರ್ಭಗಳಿಗನುಗುಣವಾಗಿ ಮಾರ್ಗಗಳನ್ನು ಅಳವಡಿಸಲಾಗಿರುತ್ತದೆ. ಸದರಿ ಮಾರ್ಗಗಳಲ್ಲಿ ಸಿಮ್ಯುಲೇಟರ್‌ ಚಾಲನೆಯನ್ನು ಅಭ್ಯರ್ಥಿಗಳು ಮಾಡುವುದರಿಂದ ಚಾಲನಾಕೌಶಲ್ಯಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ. ಈ ಸಿಮ್ಯುಲೇಟರ್‌ ತರಬೇತಿಯ ನಂತರ ಜೀಪು/ಕಾರು/ ಬಸ್‌ ಗಳಲ್ಲಿ ಪ್ರಾಯೋಗಿಕ ತರಬೇತಿಯನ್ನು ನಗರ ರಸ್ತೆಗಳಲ್ಲಿ ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT