ಶುಕ್ರವಾರ, ಜನವರಿ 21, 2022
30 °C

ಶೌಚಾಲಯದಲ್ಲಿ ಬೆತ್ತಲಾದ ವಿದ್ಯಾರ್ಥಿ; ವಿಡಿಯೊ ಬ್ಲ್ಯಾಕ್‌ಮೇಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೇಟಿಂಗ್ ಆ್ಯಪ್‌–ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಕಾಲೇಜು ವಿದ್ಯಾರ್ಥಿಯೊಬ್ಬರನ್ನು ಶೌಚಾಲಯದಲ್ಲಿ ಬೆತ್ತಲೆ ಮಾಡಿಸಿ, ಅದರ ವಿಡಿಯೊ ಸೆರೆ ಹಿಡಿದು ಬ್ಲ್ಯಾಕ್‌ಮೇಲ್ ಮಾಡಿದ ಬಗ್ಗೆ ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬಿನ್ನಿಪೇಟೆ ನಿವಾಸಿಯಾದ ವಿದ್ಯಾರ್ಥಿ ಪರವಾಗಿ ಅವರ ತಂದೆ ದೂರು ನೀಡಿದ್ದಾರೆ. ಅಪರಿಚಿತ ಯುವತಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನ.8ರಂದು ಮನೆಯಲ್ಲಿದ್ದ ವಿದ್ಯಾರ್ಥಿ, ರಾತ್ರಿ ಶೌಚಾಲಯಕ್ಕೆ ತೆರಳಿದ್ದ. ಅದೇ ಸಂದರ್ಭದಲ್ಲಿ ಮೊಬೈಲ್ ಸಹ ತೆಗೆದುಕೊಂಡು ಹೋಗಿದ್ದ. ಮೊಬೈಲ್‌ನಲ್ಲಿ ಡೇಟಿಂಗ್ ಆ್ಯಪೊಂದನ್ನು ತೆರೆದಿದ್ದ. ಸಂದೇಶ ಕಳುಹಿಸಿದ್ದ ಯುವತಿಯೊಬ್ಬಳು, ವಿಡಿಯೊ ಕರೆ ಮಾಡಿದ್ದಳು. ಅರೆನಗ್ನವಾಗಿ ವರ್ತಿಸಿದ್ದಳು. ಅದನ್ನು ನೋಡಿ ಪ್ರಚೋದನೆಗೊಂಡ ವಿದ್ಯಾರ್ಥಿ, ಬಟ್ಟೆ ತೆಗೆದು ಬೆತ್ತಲಾಗಿದ್ದ. ಅದೇ ದೃಶ್ಯವನ್ನು ಯುವತಿ ಚಿತ್ರೀಕರಿಸಿಕೊಂಡಿದ್ದಳು.’

‘ಕೆಲ ನಿಮಿಷ ಬಿಟ್ಟು ವಿದ್ಯಾರ್ಥಿ ಮೊಬೈಲ್‌ಗೆ ಕರೆ ಮಾಡಿದ್ದ ಯುವತಿ, ‘ನಿನ್ನ ಬೆತ್ತಲೆ ವಿಡಿಯೊ ನನ್ನ ಬಳಿ ಇದೆ. ನಾನು ಕೇಳಿದಷ್ಟು ಹಣ ಕೊಡಬೇಕು. ಇಲ್ಲದಿದ್ದರೆ, ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುತ್ತೇನೆ’ ಎಂದಿದ್ದಳು. ಬೆದರಿದ ವಿದ್ಯಾರ್ಥಿ, ₹ 39,100 ನೀಡಿದ್ದ. ಅದಾದ ನಂತರವೂ ಯುವತಿ, ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸಿದ್ದಳು. ಅದೇ ಸಂಗತಿಯನ್ನು ವಿದ್ಯಾರ್ಥಿ, ತಂದೆಗೆ ತಿಳಿಸಿದ್ದ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು