ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲುಪದ ₹ 4 ಲಕ್ಷ ಮೌಲ್ಯದ ಬೆಳ್ಳಿ: ಕೊರಿಯರ್‌ ಸರ್ವಿಸ್‌ ವಿರುದ್ಧ ದೂರು

Last Updated 8 ಅಕ್ಟೋಬರ್ 2019, 19:00 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರಿಯರ್‍ನಲ್ಲಿ ಕಳುಹಿಸಿದ್ದ ₹ 4 ಲಕ್ಷ ಮೌಲ್ಯದ 13 ಕೆ.ಜಿ ಬೆಳ್ಳಿ ವಸ್ತುವನ್ನು ಕೊರಿಯರ್ ಸಂಸ್ಥೆ ಲಪಟಾಯಿಸಿದೆ’ ಎಂದು ಆರೋಪಿಸಿ ಎಂ.ಜಿ. ರಸ್ತೆಯಲ್ಲಿರುವ ಬಾರ್ಟನ್ ಸನ್ ಆ್ಯಂಡ್ ಕಂಪನಿ ಮಾಲೀಕ ಭರತ್ ಎಂ. ಮೆಹ್ತಾ ಅವರು ಕಬ್ಬನ್‍ಪಾರ್ಕ್ ಠಾಣೆಗೆ ದೂರು ನೀಡಿದ್ದಾರೆ.

ದೂರು ಆಧರಿಸಿ, ಕೊರಿಯರ್ ಸಂಸ್ಥೆಯ ಮಾಲೀಕ ಜೈಶ್ ಭುವಾ ಮತ್ತು ಡೆಲಿವರಿ ಬಾಯ್ ಶ್ರೀಕಾಂತ್ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಬೆಳ್ಳಿಯನ್ನು ದೆಹಲಿಯಲ್ಲಿರುವ ಗ್ರಾಹಕರಿಗೆ ಕೊಡುವ ಸಲುವಾಗಿ ನಂದನ್ ಕೊರಿಯರ್ಸ್‌ ಸೇವೆಯನ್ನು ಬಾರ್ಟನ್ ಸನ್ ಆ್ಯಂಡ್ ಕಂಪನಿ ಪಡೆದುಕೊಂಡಿತ್ತು. ಸಂಸ್ಥೆಯ ಡೆಲಿವರಿ ಬಾಯ್ ಶ್ರೀಕಾಂತ್ ಎಂಬಾತ ಪಾರ್ಸೆಲ್‍ ತೆಗೆದುಕೊಂಡು ಕಚೇರಿಯ ವಿತರಣಾ ಮೆಮೊ ನಂಬರ್ ಮೇಲೆ ಸಹಿ ಮಾಡಿ ಹೋಗಿದ್ದ.

ನಾಲ್ಕು ದಿನ ಕಳೆದರೂ ಗ್ರಾಹಕರಿಗೆ ಬೆಳ್ಳಿ ತಲುಪದಿರುವುದು ಕಂಪನಿ ಮಾಲೀಕರ ಗಮನಕ್ಕೆ ಬಂದಿತ್ತು. ಕೊರಿಯರ್ ಸರ್ವಿಸ್‍ನವರನ್ನು ಸಂಪರ್ಕಿಸಿದಾಗ, ಅವರು ಯಾವುದೇ ದೃಢೀಕರಣ ನೀಡಿರಲಿಲ್ಲ ಎಂದು ಭರತ್ ಮೆಹ್ತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತನಿಖೆ ನಡೆಯುತ್ತಿದ್ದು, ಡೆಲಿವರಿ ಬಾಯ್ ಪಾರ್ಸೆಲ್‌ ತೆಗೆದುಕೊಂಡಿರುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ಶಂಕೆ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT