ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ರಾಜಕಾಲುವೆ ನಿರ್ಮಾಣ; ಕಟ್ಟೆಚ್ಚರಿಕೆಗೆ ಸೂಚನೆ

Published 31 ಮೇ 2023, 16:15 IST
Last Updated 31 ಮೇ 2023, 16:15 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ನೀರುಗಾಲುವೆ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಕಟ್ಟೆಚ್ಚರಿಕೆ ವಹಿಸಬೇಕು ಎಂದು ಬಿಬಿಎಂಪಿ ದಕ್ಷಿಣ ವಲಯದ ಆಯುಕ್ತ ಜಯರಾಮ ರಾಯಪುರ ಸೂಚಿಸಿದರು.

ದಕ್ಷಿಣ ವಲಯದಲ್ಲಿ ಬೃಹತ್ ನೀರುಗಾಲುವೆ (ರಾಜಕಾಲುವೆ) ಕಾಮಗಾರಿಗಳನ್ನು ಬುಧವಾರ ಅವರು ಪರಿಶೀಲಿಸಿದರು.

ಸಿಂಧೂರ್ ಕನ್ವೆನ್ಷನ್ ಹಾಲ್ ಹತ್ತಿರ ಪ್ರಗತಿಯಲ್ಲಿರುವ ಬೃಹತ್ ನೀರುಗಾಲುವೆ ಪೈಪ್ ಲೈನ್ ಕಾಮಗಾರಿಯು 17ನೇ ಕ್ರಾಸ್ ರಸ್ತೆಯವರೆಗೆ ನಡೆಯುತ್ತಿದೆ. ಈ ಸ್ಥಳದಲ್ಲಿ ಯಾವುದೇ ಅನಾಹುತ ಆಗದಂತೆ ಮುನ್ನೆಚ್ಚರಿಕೆ ನೋಡಿಕೊಳ್ಳಲು ಸಂಬಂಧಪಟ್ಟ ಎಂಜಿನಿಯರ್‌ಗೆ ಸೂಚಿಸಿದರು.

ಫ್ರ್ಯಾಂಕ್ ಪಬ್ಲಿಕ್ ಶಾಲೆ ಹತ್ತಿರ ನಡೆಯುತ್ತಿರುವ ಭೂಗತ(ಟಿಟಿ) ಕಾಮಗಾರಿಗೆ ಸಿಂಕಿಂಗ್ ಪಿಟ್‌ಗಳನ್ನು ನಿರ್ಮಿಸಿರುವ ಬಗ್ಗೆ ಪರಿಶೀಲಿಸಿ, ಗುತ್ತಿಗೆದಾರರಿಗೆ ತ್ವರಿತವಾಗಿ ಕಾಮಗಾರಿಯನ್ನು ಮುಕ್ತಾಯಗೊಳಿಸಲು ತಿಳಿಸಿದರು.

ಜಯನಗರದ ಡಾಲರ್ಸ್ ಕಾಲೊನಿ ವ್ಯಾಪ್ತಿಯ ವೈಷ್ಣವಿ ಟೆರೆಸಸ್ ಹತ್ತಿರ ವಿರುವ ಬೃಹತ್ ನೀರುಗಾಲುವೆ  ವೈಷ್ಣವಿ ಟೆರಸ್ ಹತ್ತಿರ 6 ಮೀಟರ್ ಅಗಲವಿದ್ದು, ತದನಂತರದಲ್ಲಿ ಮುಂದೆ ರೈನ್ ಬೋ ಆಸ್ಪತ್ರೆಯ ಸ್ಥಳದಲ್ಲಿ 3 ಮೀಟರ್ ಇದೆ. ನೀರುಗಾಲುವೆ ಅಗಲ ಕಡಿಮೆಯಾಗಿರುವುದರಿಂದ ಇದಕ್ಕೆ ಪರ್ಯಾಯ ಕಾಲುವೆ ನಿರ್ಮಿಸುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿದರು.

ಬೊಮ್ಮನಹಳ್ಳಿ ವಿಭಾಗಕ್ಕೆ ಸೇರುವ ಬೃಹತ್ ನೀರುಗಾಲುವೆಯ ಹೂಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಬೇಕು. 15 ದಿನಗಳಲ್ಲಿ ನೀರುಗಾಲುವೆ ಸಂಪರ್ಕಿಸುವ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT