ಶುಕ್ರವಾರ, ಫೆಬ್ರವರಿ 28, 2020
19 °C

ಕೊರೊನಾ: ಔಷಧ ವದಂತಿ ನಂಬಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಕೊರೊನಾ ವೈರಸ್‌ಗೆ ಹೋಮಿಯೋಪತಿ ಔಷಧಿ ಲಭ್ಯವಿದೆ ಎಂಬ ವದಂತಿಗಳನ್ನು ಹರಡಲಾಗುತ್ತಿದೆ. ಇದು ಸತ್ಯಕ್ಕೆ ದೂರ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ.

‘ಈ ಸೋಂಕಿಗೆ ಈವರೆಗೂ ಔಷಧಿ ಹಾಗೂ ಲಸಿಕೆಗಳು ಲಭ್ಯವಿಲ್ಲ. ಆರ್ಸೆನಿಕಂ ಆಲ್ಬಂ 30 ಸಿಎಚ್ ಎಂಬ ಔಷಧಿಯಿದೆ ಎಂಬ ತಪ್ಪು ಮಾಹಿತಿ ನೀಡಲಾಗುತ್ತಿದೆ. ಈ ರೀತಿಯ ಔಷಧಿಗಳನ್ನು ಸೇವಿಸಿ, ತೊಂದರೆ ಅನುಭವಿಸಿದಲ್ಲಿ ಅದಕ್ಕೆ ಇಲಾಖೆ ಅಥವಾ ಸರ್ಕಾರ ಹೊಣೆಯಲ್ಲ’ ಎಂದು ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ತಿಳಿಸಿದರು. 

ಈವರೆಗೆ 106 ಮಂದಿ ಶಂಕಿತರ ಪರೀಕ್ಷಾ ವರದಿ ಬಂದಿದ್ದು, ಯಾರಿಗೂ ಸೋಂಕು ತಟ್ಟಿಲ್ಲ ಎನ್ನುವುದು ದೃಢಪಟ್ಟಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು