ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: 15 ಸಾವಿರ ಮಂದಿ ತಪಾಸಣೆ

Last Updated 9 ಫೆಬ್ರುವರಿ 2020, 20:07 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಈವರೆಗೆ 15,651 ಮಂದಿ ಯನ್ನುಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆಗೆ ಒಳಪಡಿಸಲಾಗಿದೆ.

ಭಾನುವಾರ 1,498 ಮಂದಿ ಬಂದಿಳಿದಿದ್ದು, ಈವರೆಗೆ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ.ಫೆ.1ರಿಂದ ಸಾವಿರಕ್ಕೂ ಅಧಿಕ ಮಂದಿ ನಿತ್ಯ ಇಲ್ಲಿಗೆ ಬರುತ್ತಿದ್ದಾರೆ.

ಹೊಸದಾಗಿ 3 ಮಂದಿಯ ವೈದ್ಯಕೀಯ ಪರೀಕ್ಷಾ ವರದಿಪುಣೆಯ ರಾಷ್ಟ್ರೀಯ ರೋಗಸೂಕ್ಷ್ಮಾಣು ಅಧ್ಯ ಯನ ಸಂಸ್ಥೆಯಿಂದ (ಎನ್‌ಐವಿ) ಬಂದಿದ್ದು, ಅವರಿಗೆ ಸೋಂಕು ತಗುಲಿಲ್ಲ ಎಂಬುದು ದೃಢಪಟ್ಟಿದೆ. ಇದರಿಂದಾಗಿ 88 ಮಂದಿಯ ವರದಿ ಬಂದಂತಾಗಿದೆ. ಮೂವರು ಶಂಕಿತರು ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಮೇಲೆ ವಿಶೇಷ ನಿಗಾ ಇಡಲಾಗಿದೆ.

ನಗರದಲ್ಲಿ ನೆಲೆಸಿರುವವರಲ್ಲಿ 150 ಮಂದಿ ವಿವಿಧ ಅನಾರೋಗ್ಯ ಸಮಸ್ಯೆಗೆ ಒಳಗಾಗಿದ್ದು,ಆರೋಗ್ಯ ಕಾರ್ಯ
ಕರ್ತೆಯರು ಅವರ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಅವರಲ್ಲಿ 143 ಮಂದಿ ನಗರದ ವಿವಿಧೆಡೆ ಮನೆಗಳಲ್ಲಿ ನೆಲೆಸಿದ್ದು, ಉಳಿದವರು ಹೋಟೆಲ್ ಸೇರಿದಂತೆ ಬೇರೆ ಸ್ಥಳಗಳಲ್ಲಿ ವಾಸವಿದ್ದಾರೆ.ಆರೋಗ್ಯ ಸಹಾಯವಾಣಿ 104ಕ್ಕೆ 1,800 ಮಂದಿ ಕರೆ ಮಾಡಿ,
ಈ ಸೋಂಕಿನ ಬಗ್ಗೆ ಮಾಹಿತಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT