ಬೆಂಗಳೂರು: ಟ್ಯೂಷನ್ಗೆ ಹೊರಟಿದ್ದ ಬಾಲಕಿಯನ್ನು ಅಪಹರಿಸಿ ಸುಲಿಗೆ ಮಾಡಲಾಗಿದ್ದು, ಆ ಸಂಬಂಧ ಕಾಟನ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಘಟನೆ ಸಂಬಂಧ 12 ವರ್ಷದ ಬಾಲಕಿಯ ತಂದೆ ದೂರು ನೀಡಿದ್ದಾರೆ. ಅಪರಿಚಿತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಇದೇ 3ರಂದು ಸಂಜೆ ಬಾಲಕಿಶಾಲೆ ಮುಗಿಸಿ ಮನೆಗೆ ಬಂದಿದ್ದಳು. ನಂತರ ಟ್ಯೂಷನ್ಗೆ ಹೊರಟಿದ್ದಳು. ಎನ್.ಎಂ.ಲೇನ್ ಬಳಿ ಬಾಲಕಿಯನ್ನು ತಡೆದಿದ್ದ ಅಪರಿಚಿತನೊಬ್ಬ, ‘ನಿಮ್ಮ ತಂದೆ ಸಿಹಿ ತಿನಿಸು ತರಲು ಹೇಳಿದ್ದಾರೆ. ನನ್ನ ಜೊತೆ ಬಾ. ಇಬ್ಬರೂ ಹೋಗಿ ತರೋಣ’ ಎಂದಿದ್ದ. ಆತನ ಕಂಡು ಭಯಗೊಂಡಿದ್ದ ಬಾಲಕಿ, ಅಲ್ಲಿಂದ ಹೊರಡಲು ಮುಂದಾಗಿದ್ದಳು.’

‘ಆಕೆಯನ್ನು ಪುನಃ ಅಡ್ಡಗಟ್ಟಿದ್ದ ಅಪರಿಚಿತ, ಆಟೊದಲ್ಲಿ ಹತ್ತಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಅಲ್ಲಿಯೇ ಬಾಲಕಿಯ ಚಿನ್ನದ ಕಿವಿಯೋಲೆ ಹಾಗೂ ಬೆಳ್ಳಿಯ ಕಾಲ್ಗೆಜ್ಜೆ ಸುಲಿಗೆ ಮಾಡಿದ್ದ. ಆತನಿಂದ ತಪ್ಪಿಸಿಕೊಂಡಿದ್ದ ಬಾಲಕಿ, ರಸ್ತೆಯಲ್ಲಿ ಸಿಕ್ಕಿದ್ದ ಕಾನ್ಸ್ಟೆಬಲ್ ಒಬ್ಬರಿಗೆ ವಿಷಯ ತಿಳಿಸಿದ್ದರು. ಅವರೇ ತಂದೆಗೆ ಕರೆ ಮಾಡಿದ್ದರು’ ಎಂದರು.

‘ಘಟನೆಯಿಂದ ಬಾಲಕಿ ಆಘಾತಕ್ಕೆ ಒಳಗಾಗಿದ್ದಾಳೆ. ಆರೋಪಿ ಪತ್ತೆಗಾಗಿ ಘಟನಾ ಸ್ಥಳದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.