ಬೆಂಗಳೂರು: ಮನೆ ಆರೈಕೆಗೆ ಒಳಗಾದವರು ಪ್ರತಿನಿತ್ಯ ಕನಿಷ್ಠ 2 ಲೀಟರ್ ಬಿಸಿನೀರನ್ನು ಕುಡಿಯಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಪರಿಣಾಮ ಸೋಂಕು ಲಕ್ಷಣಗಳು ಬಹಿರಂಗವಾಗಿ ಗೋಚರಿಸದ ಹಾಗೂ ಪ್ರಾರಂಭಿಕ ಲಕ್ಷಣಗಳಿಂದ ಬಳಲುತ್ತಿರುವ 50 ವರ್ಷದೊಳಗಿನವರಿಗೆ ಮನೆ ಆರೈಕೆಗೆ ಸೂಚಿಸಲಾಗುತ್ತಿದೆ. ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಅಸ್ವಸ್ಥರಾದವರನ್ನು ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳಲಾಗುತ್ತಿದೆ.ಹೀಗಾಗಿ ಮನೆ ಆರೈಕೆಗೆ ಒಳಗಾಗುವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದ್ದರಿಂದ ಮನೆಯಲ್ಲಿರುವ ಸೋಂಕಿತರು ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಸೂಕ್ತ ಆರೈಕೆಯನ್ನು ಮಾಡಿಕೊಳ್ಳಬೇಕು. ಮನೆಯನ್ನೇ ಕೋವಿಡ್ ಆರೈಕೆ ಕೇಂದ್ರವನ್ನಾಗಿ ಪರಿವರ್ತಿಸಿಕೊಳ್ಳಿ ಎಂದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಸಹಾಯವಾಣಿ ಸಂಖ್ಯೆ: 14410

ಮನೆ ಆರೈಕೆಗೆ ಒಳಗಾದವರು ಏನು ಮಾಡಬೇಕು?

*ಕಡ್ಡಾಯವಾಗಿ ವೈದ್ಯಕೀಯ ಮಾಸ್ಕ್ ಅಥವಾ ಎನ್–95 ಮುಖಗವಸನ್ನು ಧರಿಸಬೇಕು

* ನಿಗದಿತ ಕೋಣೆಯಲ್ಲಿಯೇ ಇರಬೇಕು. 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು

* ಕಾಯಿಸಿ ಆರಿಸಿದ ಬಿಸಿ ನೀರನ್ನು ಕುಡಿಯಬೇಕು

* ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರ ಅಥವಾ ಟಿಶ್ಯೂ ಪೇಪರ್ ಬಳಸಬೇಕು

* ಕನಿಷ್ಠ 40 ಸೆಕೆಂಡುಗಳ ಕಾಲ ಸಾಬೂನಿನಿಂದ ಕೈಗಳನ್ನು ಸ್ವಚ್ಛ ಮಾಡಿಕೊಳ್ಳಬೇಕು

* ವೈಯಕ್ತಿಕ ವಸ್ತುಗಳಾದ ಟವೆಲ್, ಪಾತ್ರೆಗಳನ್ನು ಹಂಚಿಕೊಳ್ಳಬಾರದು

* ಕೋಣೆಗಳನ್ನು ಆಗಾಗ ಸೋಂಕು ನಿವಾರಕ ದ್ರಾವಣದಿಂದ ಸ್ವಚ್ಛಪಡಿಸುತ್ತಿರಬೇಕು

* ಸ್ನಾನಗೃಹ ಹಾಗೂ ಶೌಚಾಲಯವನ್ನು ದಿನಕ್ಕೆ ಒಮ್ಮೆಯಾದರೂ ಸ್ವಚ್ಛಪಡಿಸಬೇಕು

* ಪ್ರತಿದಿನ ಪಲ್ಸ್ ಆಕ್ಸಿಮೀಟರ್ ಮತ್ತು ಡಿಜಿಟಲ್ ಟರ್ಮಾ ಮೀಟರ್ನೊಂದಿಗೆ ಆರೋಗ್ಯವನ್ನು ಪರಿಶೀಲಿಸಿಕೊಳ್ಳಬೇಕು

* ಆರೊಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಬೇಕು

* ಧೂಮಪಾನ, ತಂಬಾಕು, ಮದ್ಯಪಾನ ಸೇವನೆ ಮಾಡಬಾರದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.