ಶನಿವಾರ, ಏಪ್ರಿಲ್ 1, 2023
23 °C

ಕೋವಿಡ್‌–19 | ಆನ್‌ಲೈನ್‌ನಲ್ಲಿ ಕಾರ್ಯಾಗಾರ: ಸೌಲಭ್ಯ ಅಗತ್ಯ, ಪಾಲನೆ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಾಂಕ್ರಾಮಿಕ ಕಾಯಿಲೆಗಳು ಬಂದಾಗ ಜನರ ಸುರಕ್ಷತೆ ದೃಷ್ಟಿಯಿಂದಲೇ ಲಾಕ್‌ಡೌನ್‌ ಘೋಷಿಸಲಾಗಿರುತ್ತದೆ. ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಜನರಿಗೆ ಅಗತ್ಯವಾದ ಸೌಲಭ್ಯವನ್ನೂ ಒದಗಿಸಬೇಕಾಗುತ್ತದೆ ಎಂದು ಕಾನೂನು ತಜ್ಞರು ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ (ಎನ್‌ಎಸ್‌ಎಸ್‌) ಘಟಕದ ವತಿಯಿಂದ ಶುಕ್ರವಾರ ಎಲ್ಲ ಸರ್ಕಾರಿ ಮತ್ತು ಖಸಗಿ ವಿಶ್ವವಿದ್ಯಾಲಯಗಳ ಸಂಯೋಜನಾಧಿಕಾರಿಗಳಿಗೆ ಮತ್ತು ನಿರ್ದೇಶನಾಲಯಗಳಿಗೆ ಹಮ್ಮಿಕೊಳ್ಳಲಾದ ಆನ್‌ಲೈನ್‌ ಕಾನೂನು ಮಾಹಿತಿ ಕಾರ್ಯಾಗಾರದಲ್ಲಿ ಈ ವಿಷಯ ತಿಳಿಸಲಾಯಿತು.

‘ಕಾನೂನುಗಳ ಮೂಲಕ ಹೇಗೆ ಕೊರೊನಾ ವೈರಸ್ ತಡೆಗಟ್ಟಬಹುದು ಎಂಬುದನ್ನು ತಿಳಿಸಲು ಇಂತಹ ಕಾರ್ಯಾಗಾರ ಉಪಯುಕ್ತ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಮತ್ತು ಮುಖ್ಯವಾಗಿ ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ಎಲ್ಲ ಕಡೆಯಿಂದಲೂ ಪ್ರಯತ್ನ ನಡೆಯಬೇಕು’ ಎಂದು ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ಹೇಳಿದರು.

ಎನ್ಎಸ್ಎಸ್ ನಿರ್ದೇಶನಾಲಯದ ನಿರ್ದೇಶಕ ಖಾದ್ರಿ ನರಸಿಂಹಯ್ಯ, ರಾಜ್ಯ ಎನ್ಎಸ್ಎಸ್ ಸಂಪರ್ಕಾಧಿಕಾರಿ ಡಾ. ಗಣನಾಥ ಶೆಟ್ಟಿ, ಬೆಂಗಳೂರು ವಿಶ್ವವಿದ್ಯಾಲಯದ ಸಂಯೋಜನಾಧಿಕಾರಿ ಡಾ.ಎನ್‌.ಸತೀಶ್ ಗೌಡ ಇದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿದ್ದ ಪ್ರೊ.ಸುರೇಶ್ ವಿ.ನಾಡಗೌಡ, ಪ್ರೊ.ಸಿ ಎನ್.ಮಂಜಪ್ಪ, ಪ್ರೊ.ಅಶೋಕ್ ಪಾಟೀಲ್, ವೈ.ಜಿ. ಮುರಳೀಧರನ್, ಪ್ರೊ.ಸುದೇಶ್, ಜಿ.ವಿ.ಮಂಜುನಾಥ್, ಪ್ರೊ.ದಶರಥ್ ವಿವಿಧ ವಿಷಯಗಳಲ್ಲಿ ಉಪಯುಕ್ತ ಕಾನೂನು ಮಾಹಿತಿ ಒದಗಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು