ಮಂಗಳವಾರ, ಏಪ್ರಿಲ್ 7, 2020
19 °C

ಜನತಾ ಕರ್ಫ್ಯೂ ಹಿನ್ನೆಲೆ: ಮೆಜೆಸ್ಟಿಕ್‌ನಲ್ಲಿ ಜನರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌ನಿಂದ ರೈಲು ಹಾಗೂ ಬಸ್‌ಗಳ ಓಡಾಟ ಸ್ಥಗಿತಗೊಂಡಿದ್ದು, ನಿಲ್ದಾಣದಲ್ಲಿ ಜಮಾಯಿಸಿರುವ 200ಕ್ಕೂ ಹೆಚ್ಚು ಮಂದಿ ತಮ್ಮ ಊರಿಗೆ ಹೋಗಲು ಪರದಾಡುತ್ತಿದ್ದಾರೆ‌.

ಉತ್ತರ ಭಾರತದವರೇ ಇದರಲ್ಲಿ ಹೆಚ್ಚಿದ್ದಾರೆ. ದೆಹಲಿ ಹಾಗೂ ಮುಂಬೈಗೆ ಹೋಗುವವರೂ ಇದ್ದಾರೆ. ಜನತಾ ಕರ್ಫ್ಯೂ ಬಗ್ಗೆ ನಮಗರ ಮಾಹಿತಿ ಇರಲಿಲ್ಲ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ. ರಸ್ತೆಯಲ್ಲಿ ಹಾಗೂ ನಿಲ್ದಾಣದಲ್ಲೇ ನಿಂತು ಯಾವುದಾದರೂ ವಾಹನ ಬರಬಹುದೆಂದು ಕಾಯುತ್ತಿದ್ದಾರೆ.

ರೈಲು ಹಾಗೂ ಬಸ್ ಸಂಚಾರವನ್ನೂ ಮಾರ್ಚ್ 31ರವರೆಗೆ ನಿರ್ಬಂಧಿಸಿರುವುದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು