ಸೋಮವಾರ, ಜೂನ್ 1, 2020
27 °C

ಮಲ್ಲೇಶ್ವರ, ಮತ್ತಿಕೆರೆಯಲ್ಲಿ ಔಷಧ ಸಿಂಪಡಣೆ ಪರಿಶೀಲಿಸಿದ ಡಾ. ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ -19 ಹಿನ್ನೆಲೆಯಲ್ಲಿ ಮಲ್ಲೇಶ್ವರ, ಅರಮನೆ ನಗರ, ಮತ್ತಿಕೆರೆ ವಾರ್ಡ್‌ಗಳಲ್ಲಿ ಪಾಲಿಕೆ ವತಿಯಿಂದ ನಡೆಯುತ್ತಿರುವ ಔಷಧ ಸಿಂಪಡಣೆ ಕಾರ್ಯವನ್ನು ಉಪಮುಖ್ಯಮಂತ್ರಿ  ಡಾ. ಸಿ ಎನ್‌ ಅಶ್ವತ್ಥನಾರಾಯಣ ಅವರು  ಸೋಮವಾರ ಪರಿಶೀಲಿಸಿದರು.

ಈ ಪ್ರದೇಶದಲ್ಲಿ ಪ್ರತಿ ದಿನ ಔಷಧ ಸಿಂಪಡಣೆ ಕಾರ್ಯ ನಡೆಯತ್ತಿದ್ದು, ಈ ಕುರಿತು ಅಧಿಕಾರಿಗಳು, ಪಾಲಿಕೆ ಸದಸ್ಯರು ಹಾಗೂ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಅವರು ಮಾಹಿತಿ ಪಡೆದುಕೊಂಡರು.

ಅರಮನೆ ನಗರದ ಪಾಲಿಕೆ ಸದಸ್ಯೆ ಬಿ.ಸುಮಂಗಲ, ಮತ್ತಿಕೆರೆಯ ಪಾಲಿಕೆ ಸದಸ್ಯ  ಎಂ.ಸಿ. ಜಯಪ್ರಕಾಶ್, ಮಲ್ಲೇಶ್ವರದ ಪಾಲಿಕೆ ಸದಸ್ಯ ಎನ್.ಜಯಪಾಲ ಉಪಸ್ಥಿತಿರಿದ್ದರು. 

ಪಡಿತರ ವಿತರಣೆ

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿದ ಡಾ. ಅಶ್ವತ್ಥನಾರಾಯಣ ಅವರು ಕೂಲಿ ಕಾರ್ಮಿಕರು, ನಿರಾಶ್ರಿತರಿಗೆ ಪಡಿತರ ವಿತರಣೆ ಮಾಡಿ, ಕುಂದುಕೊರತೆ ಆಲಿಸಿದರು.

ಪಡಿತರ ಚೀಟಿ ಇಲ್ಲದವರಿಗೂ ಪಡಿತರ ವಿತರಣೆ ಮಾಡಬೇಕೆಂಬ ರಾಜ್ಯ ಸರ್ಕಾರದ ಆದೇಶ ಪಾಲನೆ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು