ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಿದ ಬಳಿಕ ಆಕೆಪಾರ್ಶ್ವವಾಯು ಸಮಸ್ಯೆಯಿಂದ ಮೃತಪಟ್ಟಿದ್ದಾಗಿ ಹೇಳಿ
ಕೊಂಡಿದ್ದ ಆರೋಪದಡಿ ಪತಿಯನ್ನು ಮೈಕೊ ಬಡಾವಣೆ ಪೊಲೀಸರು ಬಂಧಿಸಿದ್ದಾರೆ.

ಬಿಟಿಎಂ ಬಡಾವಣೆ ಎರಡನೇ ಹಂತದ ನಿವಾಸಿ ಅಜಿತ್ ಬಂಧಿತ ಆರೋಪಿ. ಸಾನಿಯಾ ಕೊಲೆಯಾಗಿದ್ದ ಮಹಿಳೆ.

‘ಎರಡು ವರ್ಷಗಳ ಹಿಂದೆಯಷ್ಟೇ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಕೆಲವೇ ತಿಂಗಳ ನಂತರ ಪತಿಅಜಿತ್ ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಮೇ ತಿಂಗಳಲ್ಲಿ ಜಗಳ ವಿಕೋಪಕ್ಕೆ ತಿರುಗಿ, ಪತ್ನಿಯ ತಲೆಗೆ ದೊಣ್ಣೆಯಿಂದ ಬಲವಾಗಿ ಹೊಡೆದಿದ್ದ. ಇದರಿಂದ ಕುಸಿದು ಬಿದ್ದಿದ್ದಪತ್ನಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯ
ಲಾಯಿತು. ಅಷ್ಟರಲ್ಲಿಸಾನಿಯಾ ಮೃತಪಟ್ಟಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಆದರೆ, ಪತ್ನಿಯ ಮನೆಯವರಿಗೆ ಆಕೆ ಪಾರ್ಶ್ವವಾಯು ಸಮಸ್ಯೆಯಿಂದ ಮೃತಪಟ್ಟಿದ್ದಾಗಿ ಸುಳ್ಳು ಹೇಳಿದ್ದ.ಆದರೂ ಅನುಮಾನಗೊಂಡಿದ್ದ ಕುಟುಂಬದವರು ಅಜಿತ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ದಾಖಲಿಸಿಕೊಂಡ ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಬಲವಾದ ಹೊಡೆತದಿಂದ ಸಾನಿಯಾ ಮೃತಪಟ್ಟಿದ್ದಾಗಿ ವರದಿಯಲ್ಲಿ ದೃಢಪಟ್ಟಿತ್ತು. ಬಂದಿತ್ತು. ಪತಿ ಅಜಿತ್‌ನನ್ನು ಬಂಧಿಸಲಾಗಿದೆ’ ಎಂದೂ ಮಾಹಿತಿ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.