ಸೋಮವಾರ, ಜೂನ್ 14, 2021
27 °C

ತಪ್ಪಿಸಿಕೊಳ್ಳಲು ಯತ್ನ: ಆರೋಪಿ ಕಾಲಿಗೆ ಗುಂಡಿಕ್ಕಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಹಲವು ಅಪರಾಧ ಪ್ರಕರಣಗಳ ಆರೋಪಿ ರೌಡಿಶೀಟರ್ ಸೂರ್ಯನನ್ನು ಸಿಸಿಬಿ ಪೊಲೀಸರು ಗುಂಡು ಹಾರಿಸಿ ಬುಧವಾರ ಬಂಧಿಸಿದ್ದಾರೆ.

‘ಎಚ್‌ಆರ್‌ಬಿಆರ್‌ ಬಡಾವಣೆಯಲ್ಲಿ ಸೂರ್ಯನನ್ನು ಬಂಧಿಸಲು ಮುಂದಾದಾಗ ಸಿಸಿಬಿ ಹೆಡ್‌ ಕಾನ್‌ಸ್ಟೆಬಲ್ ಹನುಮೇಶ್‌ ಮೇಲೆ ಸೂರ್ಯ ಹಲ್ಲೆಗೆ ಯತ್ನಿಸಿದ. ಈ ವೇಳೆ ಆತ್ಮರಕ್ಷಣೆಗಾಗಿ ಸಿಸಿಬಿ ಎಸಿಪಿ ಪರಮೇಶ್ವರ್ ಸೂರ್ಯನ ಕಾಲಿಗೆ ಗುಂಡು ಹಾರಿಸಿದರು. ಬಳಿಕ ಆತನನ್ನು ಬೌರಿಂಗ್‌ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈತನ ವಿರುದ್ಧ ರಾಮಮೂರ್ತಿ ನಗರ, ಕೆ.ಜಿ.ಹಳ್ಳಿ, ಪುಲಿಕೇಶಿನಗರ ಠಾಣೆಗಳಲ್ಲಿ ಹಲವು ಕೊಲೆ ಪ್ರಕರಣಗಳು ದಾಖಲಾಗಿದ್ದವು.

ಇತ್ತೀಚೆಗೆ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಹಲ್ಲೆ ಪ್ರಕರಣದಲ್ಲೂ ಸೂರ್ಯ ಹಾಗೂ ಆತನ ಸಹಚರರು ಭಾಗಿಯಾಗಿದ್ದರು. ಈ ಸಂಬಂಧ ಸಿಸಿಬಿ ಎಸಿಪಿ ನೇತೃತ್ವದ ತಂಡ ಇವರ ಪತ್ತೆಗೆ ತೆರಳಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು ಮನೆಯೊಂದರಲ್ಲಿ ಇರುವುದನ್ನು ತಿಳಿದು ಬಂಧಿಸಿದ್ದರು. ಆದರೆ, ಪ್ರಮುಖ ಆರೋಪಿಯಾಗಿದ್ದ ಸೂರ್ಯ ತಲೆಮರೆಸಿಕೊಂಡಿದ್ದ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು