ಭಾನುವಾರ, ಮೇ 9, 2021
27 °C

ವಾಹನ ಕಳ್ಳನ ಬಂಧನ: ಐದು ಬೈಕ್ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮನೆಗಳ ಸಮೀಪ ನಿಲ್ಲಿಸಿರುವ ವಾಹನಗಳ ಬೀಗ ಮುರಿದು, ರಾತ್ರಿ ವೇಳೆ ಕದ್ದೊಯ್ಯುತ್ತಿದ್ದ ಆರೋಪಿಯನ್ನು ತಿಲಕನಗರ ಪೊಲೀಸರು ಬಂಧಿಸಿದ್ದಾರೆ.

ಜೆ.ಪಿ.ನಗರ ಸಮೀಪದ ರಾಗಿಗುಡ್ಡದ ಕೊಳೆಗೇರಿ ನಿವಾಸಿ ಮಾರಿಮುತ್ತು (24) ಬಂಧಿತ ಆರೋಪಿ. 

‘ಪರಪ್ಪನ ಅಗ್ರಹಾರ, ಜೆ.ಜೆ.ನಗರ, ಆಡುಗೋಡಿ ಠಾಣೆಗಳ ಸರಹದ್ದಿನಲ್ಲಿ ಕಳವು ಮಾಡಿದ್ದ ವಾಹನಗಳನ್ನು ಮಾರಲು ಯತ್ನಿಸುತ್ತಿದ್ದಾಗ ಆರೋಪಿಯನ್ನು ಬಂಧಿಸಲಾಯಿತು. ಕಳವಾಗಿದ್ದ ಐದು ದ್ವಿಚಕ್ರ ವಾಹನಗಳನ್ನು ಆರೋಪಿಯಿಂದ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಈತ ಈ ಹಿಂದೆ ಮೈಕೊ ಬಡಾವಣೆ, ಜೆ.ಪಿ.ನಗರ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ ಕಳವು ಪ್ರಕರಣಗಳಲ್ಲಿ ಜೈಲಿಗೆ ಹೋಗಿದ್ದ. ಅಲ್ಲಿಂದ ಹೊರ ಬಂದ ನಂತರವೂ ಕಳ್ಳತನ ಮುಂದುವರಿಸಿದ್ದ’ ಎಂದೂ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು