ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಡ ಪಾವತಿಗೆ ‘ಪೇಟಿಎಂ’; ಕಮಿಷನರ್ ಚಾಲನೆ

Last Updated 5 ಜುಲೈ 2021, 21:57 IST
ಅಕ್ಷರ ಗಾತ್ರ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ನಗದುರಹಿತ ದಂಡ ವಸೂಲಿಗೆ ಹಲವು ಮಾರ್ಗ ಕಂಡುಕೊಂಡಿರುವ ಪೊಲೀಸರು, ಇದೀಗ ಪೇಟಿಎಂ ಆ್ಯಪ್ ಮೂಲಕ ದಂಡ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಸ್ಥಳದಲ್ಲೇ ದಂಡ ವಿಧಿಸಲು ಜನರಿಗೆ ಅನುಕೂಲವಾಗುವಂತೆ ಪೇಟಿಎಂ ಆ್ಯಪ್ ವ್ಯವಸ್ಥೆ ರೂಪಿಸಲಾಗಿದ್ದು, ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಸೋಮವಾರ ಚಾಲನೆ ನೀಡಿದರು. ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ, ಪೇಟಿಎಂ ಹಿರಿಯ ಸಲಹೆಗಾರ ವೇಣುಗೋಪಾಲ್, ಟೆಲಿಬ್ರಹ್ಮ ಕಂಪನಿಯ ರವಿ ಇದ್ದರು.

‘ತಂತ್ರಜ್ಞಾನಕ್ಕೆ ತಕ್ಕಂತೆ ದಂಡ ವಸೂಲಿ ಪ್ರಕ್ರಿಯೆಯಲ್ಲೂ ಬದಲಾವಣೆ ಮಾಡಲಾಗುತ್ತಿದೆ. ಬೆಂಗಳೂರು ಒನ್ ಕೇಂದ್ರ, ಜಾಲತಾಣ, ಪಿಡಿಎ ಯಂತ್ರಗಳ ಮೂಲಕ ದಂಡ ಪಾವತಿಸಲು ಇದುವರೆಗೂ ಅವಕಾಶವಿತ್ತು. ಇದೀಗ ಪೇಟಿಎಂ ಮೂಲಕವೂ ದಂಡ ಪಾವತಿಗೆ ವ್ಯವಸ್ಥೆ ಮಾಡಲಾಗಿದೆ. ಮೊಬೈಲ್ ಬಳಕೆದಾರರೇ ಹೆಚ್ಚಿರುವ ಇಂದಿನ ದಿನಗಳಲ್ಲಿ ಹೊಸ ವ್ಯವಸ್ಥೆಯಿಂದ ಹಲವರಿಗೆ ಉಪಯೋಗವಾಗಲಿದೆ’ ಎಂದು ಪಂತ್ ಹೇಳಿದರು.

‘ಟೆಲಿಬ್ರಹ್ಮ ಸಾಫ್ಟ್‌ವೇರ್ ಕಂಪನಿ ಸಹಯೋಗದಲ್ಲಿ ಪೇಟಿಎಂ ಕಂಪನಿ ಜೊತೆ ಸೇರಿ ಈ ಹೊಸ ವ್ಯವಸ್ಥೆ ರೂಪಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT