ಬೆಂಗಳೂರು: ಬೆಳ್ಳಂದೂರಿನಲ್ಲಿರುವ ಕ್ರಿಪ್ಟೊ ಕರೆನ್ಸಿ ಟ್ರೇಡಿಂಗ್ ಕಂಪನಿಯಾದ ನೆಬಿಲೊ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನ ಸರ್ವರ್ ಹ್ಯಾಕ್ ಮಾಡಿ ₹ 378 ಕೋಟಿ ಮೌಲ್ಯದ ಕ್ರಿಪ್ಟೊ ಕರೆನ್ಸಿ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ವೈಟ್ಫೀಲ್ಡ್ನ ಸೆನ್ ಠಾಣೆ ಪೊಲೀಸರು ಬಂಧಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ಮತ್ತೊಂದೆಡೆ ದೋಚಿರುವ ಹಣವನ್ನು ವಾಪಸ್ ಕೊಡಿಸಿದರೆ ಸೂಕ್ತ ಬಹುಮಾನ ನೀಡುವುದಾಗಿಯೂ ಕಂಪನಿ ಘೋಷಿಸಿದೆ.

‘ಜಾರ್ಖಂಡ್ ಮೂಲದ ಆರೋಪಿ ರಾಹುಲ್ ಸರ್ಜಾಪುರ ರಸ್ತೆಯ ಕಾರ್ಮೆರಾಮ್ ಬಳಿ ವಾಸವಾಗಿದ್ದ. ನಾಲ್ಕು ವರ್ಷಗಳಿಂದ ಕ್ರಿಪ್ಟೊ ಕರೆನ್ಸಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಕಚೇರಿ ಕೆಲಸಕ್ಕಾಗಿ ಕಂಪನಿಯು ಲ್ಯಾಪ್ಟಾಪ್ ನೀಡಿತ್ತು. ಇದರೊಂದಿಗೆ ರಾಹುಲ್ ಒಂದೂವರೆ ವರ್ಷಗಳಿಂದ ಬೇರೆ ಕಂಪೆನಿಯಲ್ಲಿ ಅರೆಕಾಲಿಕವಾಗಿ ಕೆಲಸ ಮಾಡಿಕೊಂಡಿದ್ದ. ಎರಡು ಕಂಪನಿಗಳ ಕೆಲಸವನ್ನು ಒಂದೇ ಲ್ಯಾಪ್ ಟಾಪ್ನಲ್ಲಿ ಮಾಡುತ್ತಿದ್ದ. ಕಂಪನಿಯ ನಿಯಮಾವಳಿ ಪ್ರಕಾರ ಇದು ಅಪರಾಧವಾಗಿತ್ತು. ಸೈಬರ್ ಕಳ್ಳರು ಜುಲೈ 19ರಂದು ಮಾಲ್ವೇರ್ ವೈರಸ್ ಮೂಲಕ ಲ್ಯಾಪ್ಟಾಪ್ ಹ್ಯಾಕ್ ಮಾಡಿದ್ದರು ಎಂಬುದು ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

ಲ್ಯಾಪ್ಟಾಪ್ ಹ್ಯಾಕ್ ಮಾಡಿ ಸಂಪೂರ್ಣವಾಗಿ ಹಿಡಿತಕ್ಕೆ ತೆಗೆದುಕೊಂಡ ವಂಚಕರು, ಜುಲೈ 19ರಂದು ಮುಂಜಾನೆ ಒಂದು ಯುಎಸ್ಡಿಟಿ ಹಾಗೂ ಬೆಳಿಗ್ಗೆ 9.40ರ ವೇಳೆ 44 ಮಿಲಿಯನ್ ಡಾಲರ್ ಅನ್ನು ಕ್ಷಣಾರ್ಧದಲ್ಲಿ ಕಂಪನಿಯ ವ್ಯಾಲೆಟ್ನಿಂದ ತಮ್ಮ ಕ್ರಿಪ್ಟೊ ವ್ಯಾಲೆಟ್ಗೆ ರವಾನಿಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

‘ದೋಚಿರುವ ಹಣವನ್ನು ಹಿಂಪಡೆಯುವ ಸಲುವಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಜಾಗತಿಕಮಟ್ಟದ ಸೈಬರ್ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದೇವೆ. ಹಲವು ಕಾನೂನು ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಹೂಡಿಕೆದಾರರ ಹಣ ಸುರಕ್ಷಿತವಾಗಿದೆ’ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.