ಬೆಂಗಳೂರು: ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ಮೂರು ಬ್ಯಾಂಕ್ ಖಾತೆಗಳಿಂದ ಸೈಬರ್ ವಂಚಕರು ₹3 ಲಕ್ಷ ದೋಚಿದ್ದಾರೆ.

ಮೂರು ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ಪ್ರತಿ ಖಾತೆಯಿಂದ ₹ 1 ಲಕ್ಷದಂತೆ ಒಟ್ಟು ₹ 3 ಲಕ್ಷವನ್ನು ದೋಚಿದ್ದಾರೆ. ಸೈಬರ್ ವಂಚಕರು ಹಣ ದೋಚಿರುವ ಸಂಗತಿಯನ್ನು ಸದಾನಂದಗೌಡ ಅವರೂ ದೃಢಪಡಿಸಿದ್ದು, ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

‘ಬ್ಯಾಂಕ್ ಖಾತೆಗಳಿಂದ ಹಣ ಡ್ರಾ ಆಗಿರುವುದು ಬುಧವಾರ ಬೆಳಿಗ್ಗೆ ನನ್ನ ಗಮನಕ್ಕೆ ಬಂತು. ಆರೋಪಿಗಳು ಎಲ್ಲೋ ಕುಳಿತು ವಂಚನೆ ಎಸಗಿದ್ದಾರೆ’ ಎಂದು ಸದಾನಂದಗೌಡ ಅವರು ತಿಳಿಸಿದ್ದಾರೆ.

ನಟ, ನಿರ್ದೇಶಕ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಅನ್ನು ಇತ್ತೀಚೆಗೆ ವಂಚಕರು ಹ್ಯಾಕ್ ಮಾಡಿ ₹ 1.50 ಲಕ್ಷವನ್ನು ವಂಚಿಸಿದ್ದರು. ಉಪೇಂದ್ರ ಅವರು ಕೇಂದ್ರ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
.ನಟ ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್: ಎಚ್ಚರಿಕೆ ಸಂದೇಶದಲ್ಲಿ ಏನಿದೆ?.PHOTOS | ಪತ್ನಿ, ಮಕ್ಕಳೊಂದಿಗೆ ರಿಯಲ್ ಸ್ಟಾರ್ ಉಪೇಂದ್ರ ಮೋಜುಮಸ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.