ಬುದ್ಧಿವಂತರೇ ಕೆಲವೊಮ್ಮೆ ದಡ್ಡರಾಗುತ್ತೇವೆ. ಆರ್ಡರ್ ಡೆಲಿವರಿ ಮಾಡುವವರ ಸೋಗಿನಲ್ಲಿ ಕರೆ ಮಾಡಿ ವಂಚಿಸಿದ್ದರು. ವಂಚನೆ ಆಗಿರುವುದು ನಮಗೆ ತಿಳಿಯುವಷ್ಟರಲ್ಲೇ ನನ್ನ ಮಗ, ಪ್ರಿಯಾಂಕಾ ಅವರ ಸ್ನೇಹಿತರು ಹಣ ವರ್ಗಾಯಿಸಿದ್ದರು. ತಕ್ಷಣವೇ ವಿಡಿಯೊ ಮೂಲಕ ಎಲ್ಲರನ್ನೂ ಎಚ್ಚರಿಸಿದ್ದೆವು. ಪೊಲೀಸರಿಗೆ ದೂರು ಕೊಟ್ಟ ಬಳಿಕ ಯಾರೂ ಹಣ ವರ್ಗಾಯಿಸಿರಲಿಲ್ಲ
ಉಪೇಂದ್ರ, ನಟ
ಈ ಪ್ರಕರಣದಲ್ಲಿ ವಿಭಿನ್ನ ಮಾದರಿಯಲ್ಲಿ ವಂಚನೆ ಮಾಡಲಾಗಿತ್ತು. ‘ಗೋಲ್ಡನ್ ಅವರ್’ನಲ್ಲಿ ದೂರು ನೀಡಿದ್ದರಿಂದ ಆರೋಪಿಯನ್ನು ಬೇಗನೆ ಪತ್ತೆಹಚ್ಚಲು ಸಹಕಾರಿ ಆಯಿತು. ಈ ಪ್ರಕರಣದ ಮೂಲಕ ಆರೋಪಿಯು ಭಾಗಿಯಾಗಿರುವ ಇತರೆ ಕೆಲವು ಪ್ರಕರಣಗಳ ಮಾಹಿತಿಯೂ ಗೊತ್ತಾಗಿದ್ದು, ತನಿಖೆ ಮುಂದುವರಿಸಲಾಗಿದೆ