ಭಾನುವಾರ, ಏಪ್ರಿಲ್ 11, 2021
33 °C

‘ಬೇಂದ್ರೆ ಕಾವ್ಯಗಳು ಕನ್ನಡದ ಶಕ್ತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನೆಲಮಂಗಲ: ‘ಭಾಷೆಯೊಂದಿಗೆ ಆಳವಾದ ಸಂಬಂಧ ಹೊಂದಿದ್ದ ದ.ರಾ. ಬೇಂದ್ರೆ ಅವರ ಕಾವ್ಯಗಳು ಕನ್ನಡದ ಶಕ್ತಿಯಾಗಿವೆ’ ಎಂದು ಕನ್ನಡ ಸಾಂಸ್ಕೃತಿಕ ರಂಗದ ಅಧ್ಯಕ್ಷ ಡಿ.ಸಿದ್ದರಾಜು ತಿಳಿಸಿದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬೇಂದ್ರೆ ಅವರ 125ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕ ಬದುಕಿನಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಕೈಗೊಂಡು ಕಾವ್ಯ ಸಂಸ್ಕೃತಿಯನ್ನು ನಿರ್ಮಿಸುವ ಲೋಕೋಪಯೋಗಿ ಕೆಲಸವನ್ನು ಅವರು ಮಾಡಿದ್ದರು’ ಎಂದರು.

ಸಾಹಿತಿ ವೆಂಕಟೇಶ್ ಆರ್. ಚೌಥಾಯಿ ಅವರು ಕನ್ನಡ ಸಾಂಸ್ಕತಿಕ ರಂಗದ ಪರವಾಗಿ ವಿದ್ಯಾರ್ಥಿಗಳಿಗೆ ‘ಕನ್ನಡ ರತ್ನಕೋಶ’ ಮತ್ತು ‘ಮಕರಂದ’ ಮಕ್ಕಳ ಸಣ್ಣ ಕಥೆಗಳ ಪುಸ್ತಕಗಳನ್ನು ವಿತರಿಸಿದರು ಮತ್ತು ಬೇಂದ್ರೆ ಕಾವ್ಯಗಳನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು.

ಪ್ರಾಂಶುಪಾಲ ಬಾಲಕೃಷ್ಣಯ್ಯ, ‘ಪ್ರತಿ ತಿಂಗಳು ರಾಜ್ಯೋತ್ಸವವನ್ನು ಆಚರಿಸುತ್ತಿರುವ, ಕನ್ನಡ ಕವಿಗಳ ಜನ್ಮದಿನದಂದು ಅವರನ್ನು ಸ್ಮರಿಸುವ, ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಪಸರಿಸುತ್ತಿರುವ ಕನ್ನಡ ಸಾಂಸ್ಕೃತಿಕ ರಂಗದ ಕಾರ್ಯ ಶ್ಲಾಘನೀಯ' ಎಂದರು.

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಪುಷ್ಪ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಲಕ್ಷ್ಮೀನಾರಾಯಣ ಶ್ರೇಷ್ಠಿ, ಬಿಎಸ್ಎನ್ಎಲ್ ಕಾರ್ಮಿಕ ಮುಖಂಡ ಬಾಲಾಜಿ, ಸಾಂಸ್ಕೃತಿಕ ರಂಗದ ಅಶ್ವತ್ಥ ನಾರಾಯಣ್, ಯುವ ಮುಖಂಡ ವಿಜಯ್‌ಕುಮಾರ್‌, ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ದಿವ್ಯಶ್ರೀ, ಉಪನ್ಯಾಸಕಿ ಶ್ವೇತಾ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು