ಸೋಮವಾರ, ಮಾರ್ಚ್ 1, 2021
20 °C

ದಾಬಸ್ ಪೇಟೆ: ಗರಿಗೆದರಿದ ಕೃಷಿ ಚಟುವಟಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾಬಸ್ ಪೇಟೆ: ಸೋಂಪುರ ಹೋಬಳಿಯುದ್ದಕ್ಕೂ ನಾಲ್ಕೈದು ದಿನಗಳಿಂದ ಪೂರ್ವ ಮುಂಗಾರು ಹದವಾಗಿ ಬೀಳುತ್ತಿದ್ದು ರೈತರು ಹೊಲಗಳ ಉಳುಮೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ಭರಣಿ ಮಳೆ ಬಿದ್ದರೆ ಧರಣಿ ತುಂಬಾ ಬೆಳೆ ಅನ್ನುವ ಮಾತಿದೆ. ಅದರಂತೆ ಭರಣಿ ಮಳೆ ಹೋಬಳಿಯಾದ್ಯಂತ ಬೀಳುತ್ತಿದ್ದು, ಈ ವರ್ಷ ಉತ್ತಮ ಬೆಳೆ ಆಗುತ್ತದೆ ಎನ್ನುವ ಆಶಯದಲ್ಲಿ ರೈತರ ಮೊಗದಲ್ಲಿ ಹರುಷ ಮೂಡಿಸಿದೆ.

ತೊಗರಿ, ಅವರೆ, ಅಲಸಂದೆ, ಮುಸುಕಿನ ಜೋಳ, ಕಡಲೆ ಕಾಯಿ ಇತ್ಯಾದಿ ಬೆಳೆಗಳನ್ನು ಪೂರ್ವ ಮುಂಗಾರಿನಲ್ಲಿ ಬಿತ್ತನೆ ಮಾಡಿದರೆ ಉತ್ತಮ ಫಸಲು ಸಿಗುತ್ತದೆನ್ನುವುದು ರೈತರ ನಿರೀಕ್ಷೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು