‘ಎಲ್ಲ ನೌಕರರು ಆರೋಗ್ಯವಂತರಾಗಿರಬೇಕು’
ಆರೋಗ್ಯವಂತ ನೌಕರರೇ ಕೆಎಸ್‌ಆರ್‌ಟಿಸಿಯ ಆಸ್ತಿ. ಎಲ್ಲ ನೌಕರರು
ಆರೋಗ್ಯವಂತರಾಗಿ ಕೆಲಸ ಮಾಡಬೇಕು. ಹೃದಯಾಘಾತ ಸಹಿತ ಯಾವುದೇ ಸಾವುನೋವು ಉಂಟಾಗಬಾರದು ಎಂಬುದು ನಮ್ಮ ಕಳಕಳಿ. ಕೆಎಸ್ಆರ್‌ಟಿಸಿ ನೌಕರರಿಗೆ ಹೃದಯ ತಪಾಸಣೆಯು ಪ್ರಮುಖ ಯೋಜನೆಯಾಗಿದ್ದು, ಉತ್ತಮ ಪರಿಣಾಮ ಬೀರಿದೆ. ಹೃದಯಾಘಾತ ಪ್ರಮಾಣವನ್ನು ಕಡಿಮೆಗೊಳಿಸಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.