ಬುಧವಾರ, ಸೆಪ್ಟೆಂಬರ್ 22, 2021
21 °C

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪೀಣ್ಯ ದಾಸರಹಳ್ಳಿ:‘ತಮಿಳುನಾಡಿನ ರಾಜಕೀಯ ಪ್ರೇರಿತ ಅಡೆತಡೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಣಿಯಬಾರದು. ಮೇಕೆದಾಟು ಯೋಜನೆಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು’ ಎಂದು ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಆಗ್ರಹಿಸಿದರು.

ಹೆಗ್ಗನಹಳ್ಳಿಯಲ್ಲಿ ಹಸಿರು ಪ್ರತಿ ಷ್ಠಾನದ ವತಿಯಿಂದ ಶನಿವಾರ ಆಯೋ ಜಿಸಿದ್ದ ಮೇಕೆದಾಟು ಯೋಜನೆ ಅನು ಷ್ಠಾನ ಕುರಿತ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.

‘ಮುಂದಿನ 10 ವರ್ಷದಲ್ಲಿ ಬೆಂಗ ಳೂರಿನ ಜನಸಂಖ್ಯೆ ಎರಡು ಕೋಟಿ ಮೀರಲಿದೆ. ಇವರಿಗೆ ನೀರಿನ ಅಭಾವ ಎದುರಾಗಲಿದ್ದು, ಮುಂಜಾಗ್ರತಾ ಕ್ರಮವಾಗಿ ಮೇಕೆದಾಟು ಯೋಜನೆ ಜಾರಿಯಾಗುವುದರಿಂದ ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ನೀರಿನ ಬವಣೆ ನೀಗಲಿದೆ’ ಎಂದು ಸಲಹೆ ನೀಡಿದರು.

ಹಸಿರು ಪ್ರತಿಷ್ಠಾನದ ಅಧ್ಯಕ್ಷ ಕೆ.ಜಿ.ಕುಮಾರ್ ಮಾತನಾಡಿ, ‘ತಮಿಳುನಾಡಿನ ರಾಜಕೀಯ ವನ್ನು ಎಲ್ಲ ಕನ್ನಡಿಗರು ಹಿಮ್ಮೆಟ್ಟಿಸಬೇಕು. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು, ಯೋಜನೆಯನ್ನು ಪೂರ್ಣಗೊಳಿಸ
ಬೇಕು’ ಎಂದು ಒತ್ತಾಯಿಸಿದರು.

ಜಯ ಕರ್ನಾಟಕ ಸಂಘಟನೆಯ ಬಿ.ಎನ್.ಜಗದೀಶ್ ಮಾತನಾಡಿ ‘ರಾಜ್ಯದ ಎಲ್ಲ ಸಂಸದರು ಮೇಕೆದಾಟು ಯೋಜನೆ ಅನುಷ್ಠಾನದ ಬಗ್ಗೆ ಕೇಂದ್ರಕ್ಕೆ ಏಕೆ ಒತ್ತಾಯಿಸುತ್ತಿಲ್ಲ, ಸಂಘಟನೆಗಳು ಮಾತ್ರ ಹೋರಾಟ ಮಾಡಬೇಕೆ?’ ಎಂದು ಪ್ರಶ್ನಿಸಿದರು.

ಸಭೆಯಲ್ಲಿ ಕನ್ನಡಪರ ಚಿಂತಕ
ವ.ಚ.ಚನ್ನೇಗೌಡ, ಎಂ.ಪ್ರಕಾಶ್ ಮೂರ್ತಿ, ಡಾ ಆಂಜನಪ್ಪ, ಯುವರಾಜ, ನಾಗರತ್ನ ಹಾಗೂ ವಿವಿಧ
ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು