ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶವಂತಪುರ– ತುಮಕೂರು ಡೆಮು ರೈಲು ಸೇವೆ ಇಂದಿನಿಂದ

Last Updated 14 ಅಕ್ಟೋಬರ್ 2019, 20:08 IST
ಅಕ್ಷರ ಗಾತ್ರ

ಬೆಂಗಳೂರು: ರೈಲ್ವೆ ಇಲಾಖೆಯು ಪ್ರಮುಖ ನಗರದಿಂದ ಆಸುಪಾಸಿನ ಸಣ್ಣ ನಗರಗಳಿಗೆ ರೈಲು ಸಂಪರ್ಕ ಕಲ್ಪಿಸುವ ಸಲುವಾಗಿ ಇದೇ 15ರಿಂದ 10 ಕಡೆ ಡೆಮು ಸೇವೆ ಆರಂಭಿಸಲಿದೆ. ಇದರ ಅಂಗವಾಗಿ ಯಶವಂತಪುರ– ತುಮಕೂರು ನಡುವೆ ವಾರದಲ್ಲಿ ಆರು ದಿನ (ಭಾನುವಾರ ಹೊರತುಪಡಿಸಿ) ಡೆಮು ರೈಲು (ನಂ.76527/76528) ಶುರುವಾಗಲಿದೆ.

ಕೇಂದ್ರ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಈ ಸೇವೆಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಚಾಲನೆ ನೀಡಲಿದ್ದಾರೆ. ಆರಂಭಿಕ ರೈಲು ತುಮಕೂರಿನಿಂದ ಮಧ್ಯಾಹ್ನ 2 ಗಂಟೆಗೆ ಹೊರಡಲಿದೆ.

ರೈಲು ಯಶವಂತಪುರದಿಂದ ನಿತ್ಯ ರಾತ್ರಿ 7.50ಕ್ಕೆ ಹೊರಟು ರಾತ್ರಿ 9.25ಕ್ಕೆ ತುಮಕೂರು ತಲುಪಲಿದೆ. ಚಿಕ್ಕಬಾಣಾವರ (ರಾತ್ರಿ 7.59), ಸೋಲದೇವನಹಳ್ಳಿ (ರಾತ್ರಿ 8.02), ಗೊಲ್ಲಹಳ್ಳಿ (ರಾತ್ರಿ 8.12), ಬೈರನಾಯಕನಹಳ್ಳಿ (ರಾತ್ರಿ 8.19), ದೊಡ್ಡಬೆಲೆ (ರಾತ್ರಿ 8.24), ಮುದ್ದಲಿಂಗನಹಳ್ಳಿ (ರಾತ್ರಿ 8.32), ನಿಡವಂದ (ರಾತ್ರಿ 8.36), ದಾಬಸ್‌ಪೇಟೆ (ರಾತ್ರಿ 8.41), ಹಿರೇಹಳ್ಳಿ (ರಾತ್ರಿ 8.49), ಕ್ಯಾತ್ಸಂದ್ರದಲ್ಲಿ (ರಾತ್ರಿ 8.56) ನಿಲುಗಡೆ ಇದೆ.

ತುಮಕೂರಿನಿಂದ ರಾತ್ರಿ 9.50ಕ್ಕೆ ಹೊರಡುವ ರೈಲು ಯಶವಂತಪುರಕ್ಕೆ ರಾತ್ರಿ 11.25ಕ್ಕೆ ತಲುಪಲಿದೆ. ಕ್ಯಾತ್ಸಂದ್ರ (ರಾತ್ರಿ 9.57), ಹಿರೇಹಳ್ಳಿ (ರಾತ್ರಿ 10.04), ದಾಬಸ್‌ಪೇಟೆ (ರಾತ್ರಿ 10.11), ನಿಡವಂದ (ರಾತ್ರಿ 10.14), ಮುದ್ದಲಿಂಗನಹಳ್ಳಿ (ರಾತ್ರಿ 10.17), ದೊಡ್ಡಬೆಲೆ (ರಾತ್ರಿ 10.23), ಬೈರನಾಯಕನಹಳ್ಳಿ (ರಾತ್ರಿ 10.28), ಗೊಲ್ಲಹಳ್ಳಿ (ರಾತ್ರಿ 10.33), ಸೋಲದೇವನಹಳ್ಳಿ (ರಾತ್ರಿ ರಾತ್ರಿ 10.40), ಚಿಕ್ಕಬಾಣಾವರ (ರಾತ್ರಿ 10.43) ನಿಲುಗಡೆ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT