ಬೆಂಗಳೂರು: ರಾಜ್ಯ ಸರ್ಕಾರದ ₹400 ಕೋಟಿ ಅನುದಾನದಲ್ಲಿ ನಗರದಲ್ಲಿ ಹೆಚ್ಚು ವಾಹನ ದಟ್ಟಣೆ ಇರುವ ಒಂಬತ್ತು ಕಾರಿಡಾರ್‌ಗಳನ್ನು ಟೆಂಡರ್ ಶ್ಯೂರ್ ಅಥವಾ ಸ್ಮಾರ್ಟ್ ಸಿಟಿ ರಸ್ತೆಗಳ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಬಿಬಿಎಂಪಿ ಮುಂದಾಗಿದೆ.
ಬಿಬಿಎಂಪಿ ಈ ಯೋಜನೆಯಲ್ಲಿ 44 ಕಿಮೀ ರಸ್ತೆ ಹಾಗೂ 110 ಕಿಮೀ ಪಾದಚಾರಿ ಮಾರ್ಗವನ್ನು ಅಭಿವೃದ್ಧಿಪಡಿಸಲಿದೆ. ಬಿಬಿಎಂಪಿ ಪ್ರಕಾರ, 12 ಹೆಚ್ಚು ವಾಹನದಟ್ಟಣೆ ಕಾರಿಡಾರ್ ಗಳಲ್ಲಿ ವೆಸ್ಟ್ ಆಫ್ ರಸ್ತೆ, ಬನ್ನೇರುಘಟ್ಟ ರಸ್ತೆಗಳನ್ನು ಈಗಾಗಲೇ
ಅಭಿವೃದ್ಧಿಪಡಿಸಲಾಗಿದೆ. ಅವುಗಳನ್ನು ಹೊರತುಪಡಿಸಿ 9 ಕಾರಿಡಾರ್ಗಳನ್ನು ವಾಹನ ಸವಾರರು ಹಾಗೂ ಪಾದಚಾರಿ ಸ್ನೇಹಿಯಾಗಿ ಅಭಿವೃದ್ಧಿ ಪಡಿಸಲಾಗುತ್ತದೆ.
ಒಂಬತ್ತು ಕಾರಿಡಾರ್‌ಗಳನ್ನೂ ಮರು ವಿನ್ಯಾಸಗೊಳಿಸಿ, ಏಕರೂಪದಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ. ಅಮೆರಿಕ ಹಾಗೂ ಯುರೋಪ್‌ನಲ್ಲಿ ಹೆಚ್ಚು ಬಳಕೆಯಲ್ಲಿರುವ ಸ್ಟೋನ್ ಮಾಸ್ಟಕ್ ಅಸ್ಫಾಲ್ಟ್ (ಎಸ್ಎಂಎ ) ತಂತ್ರಜ್ಞಾನದಲ್ಲಿ ಈ ಕಾರಿಡಾರ್‌ಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. ಈ ತಂತ್ರಜ್ಞಾನ ರಸ್ತೆಗಳು ಸ್ಥಿರ, ಜಾರುರಹಿತ, ಅತ್ಯುತ್ತಮ ಸಾಮರ್ಥ್ಯದಲ್ಲಿ ಇರಲಿವೆ.
ರಾಜ್ಯ ಸರ್ಕಾರದ ಈ ಅನುದಾನ ದಲ್ಲಿ ಹೆಚ್ಚು ಭಾಗವನ್ನು ಪಾದಚಾರಿ ಮಾರ್ಗ ಅಭಿವೃದ್ಧಿ ಪಡಿಸಲು ಉಪಯೋಗಿಸಲಾಗುತ್ತದೆ. ರಸ್ತೆ ಅಗಲ ಇರುವ ಸ್ಥಳದಲ್ಲಿ ಸೈಕಲ್ ಟ್ರಾಕ್ ನಿರ್ಮಿಸ ಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು.
ರಾಜ್ಯ ಸರ್ಕಾರ ಈ ಯೋಜನೆಗೆ ಡಲ್ಟ್ ಅನ್ನು ಸಲಹೆಗಾರ ಸಂಸ್ಥೆಯಾಗಿ ನೇಮಿಸಿದ್ದು, ಕಾಮಗಾರಿ ಗುಣಮಟ್ಟ ಪರಿಶೀಲಿಸಲಿದೆ. ಹೊರ ವರ್ತುಲ ರಸ್ತೆ (ಒಆರ್‌ಆರ್) ರಸ್ತೆ ಸೇರಿದಂತೆ ಮುಖ್ಯ ರಸ್ತೆಗಳ ಅಭಿವೃದ್ಧಿ ಜವಾಬ್ದಾರಿ ಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ಈ ಮೊದಲು ಹೊಂದಿತ್ತು.
ಜನಪ್ರತಿನಿಧಿಗಳ ಒತ್ತಡದ ಮೇರೆಗೆ ರಾಜ್ಯ ಸರ್ಕಾರ ಈ ರಸ್ತೆಗಳ ನಿರ್ವಹಣೆ ಜವಾಬ್ದಾರಿಯನ್ನು ಬಿಬಿಎಂಪಿಗೆ ವಹಿಸಿ ಕಳೆದ ತಿಂಗಳು ಆದೇಶ ಹೊರಡಿಸಿದೆ.
₹400 ಕೋಟಿಯಲ್ಲಿ ₹273 ಕೋಟಿಯನ್ನು 9 ಕಾರಿಡಾರ್ ಅಭಿವೃದ್ಧಿಗೆ ಉಪಯೋಗಿಸಲಾಗುತ್ತಿದೆ. ಉಳಿದ ಹಣ ನಿರ್ವಹಣೆಗೆ ಮೀಸಲಿಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.