ಶುಕ್ರವಾರ, ಡಿಸೆಂಬರ್ 4, 2020
24 °C

ನೀರಿನ ಶುಲ್ಕ ಡಿಜಿಟಲ್ ಪಾವತಿ: ಅವಧಿ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಡಿಜಿಟಲ್‌ ಮಾರ್ಗಗಳ ಮೂಲಕವೂ ನೀರಿನ ಶುಲ್ಕ ಪಾವತಿಸಲು ವ್ಯವಸ್ಥೆ ಮಾಡಿದ್ದ ಜಲಮಂಡಳಿ, ಈ ಸೌಲಭ್ಯವನ್ನು ಡಿಸೆಂಬರ್‌ವರೆಗೆ ವಿಸ್ತರಿಸಿದೆ.

ಮಂಡಳಿಯ ಕಿಯೋಸ್ಕ್‌ಗಳಲ್ಲಿ ಚೆಕ್‌ ಅಥವಾ ಡಿಡಿ ಮೂಲಕವೂ ಶುಲ್ಕ ತೆಗೆದುಕೊಳ್ಳಲಾಗುತ್ತಿತ್ತು. ಆದರೆ, ಚೆಕ್‌ಗಳು ಹೆಚ್ಚಿನ ಬ್ಯಾಂಕುಗಳಲ್ಲಿ ತಿರಸ್ಕೃತವಾಗುತ್ತಿದ್ದುದರಿಂದ ಮಂಡಳಿ ಡಿಜಿಟಲ್‌ ಪಾವತಿಗೆ ಅವಕಾಶ ನೀಡಿದೆ.

ಚೆಕ್‌ ಅಥವಾ ಡಿಡಿ ಬದಲಿಗೆ ಮಂಡಳಿಯ ಕಿಯೋಸ್ಕ್‌ಗಳಲ್ಲಿ ನಗದು ಮೂಲಕ ಮಾತ್ರ ಶುಲ್ಕ ಸ್ವೀಕರಿಸಲಾಗುತ್ತದೆ. ಅಲ್ಲದೆ, ಬಿಬಿಪಿಎಸ್, ಪೇಟಿಎಂ, ಭೀಮ್, ಅಮೇಜಾನ್, ಫೋನ್‌ಪೇ, ಗೂಗಲ್‌ಪೇ ಸೇರಿದಂತೆ ಡಿಜಿಟಲ್ ಮಾಧ್ಯಮದ ಮೂಲಕ ಪಾವ ತಿಸಬಹುದು ಎಂದು ಮಂಡಳಿ ಹೇಳಿದೆ. ನ. 1ರಿಂದ ಈ ಸೌಲಭ್ಯವನ್ನು ಜಾರಿಗೆ ತರಲಾಗಿತ್ತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.