ಬೆಂಗಳೂರು/ ನೆಲಮಂಗಲ: ನಗರ, ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಯ 70 ಕೆರೆಗಳನ್ನು ತುಂಬಿಸುವ ವೃಷಭಾವತಿ ಏತ ನೀರಾವರಿ ಯೋಜನೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ಚಾಲನೆ ನೀಡಿದರು.

ನೆಲಮಂಗಲ ತಾಲ್ಲೂಕಿನ ಕಣೇಗೌಡನಹಳ್ಳಿಯ ಕೆರೆ ಬಳಿ ವೃಷಭಾವತಿ ಕಣಿವೆಯಿಂದ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ತುಂಬಿಸುವ ವೃಷಭಾವತಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

‘ವೃಷಭಾವತಿಯಿಂದ ಕೊಳಚೆ ನೀರು ನೀಡುತ್ತಿಲ್ಲ. ನಾಯಂಡಳ್ಳಿ ಬಳಿ ಶುದ್ಧೀಕರಣ ಮಾಡಿದ ನಂತರ ನೆಲಮಂಗಲ ತಾಲ್ಲೂಕಿನ ಕೆರೆಗಳಿಗೆ ಹರಿಸಲಾಗುತ್ತದೆ. ಕೆರೆಯಲ್ಲಿಯೂ ಸಹ ಭೂಮಿಗೆ ಇಂಗುವಾಗಲೂ ನೀರು ಶುದ್ಧವಾಗುತ್ತದೆ. ಶುದ್ಧೀಕರಿಸಿ ನೀಡುತ್ತಿರುವ ನೀರನ್ನು ಕುಡಿಯಲು ಆಗುವುದಿಲ್ಲ. ರೈತರ ಬದುಕನ್ನು ಹಸನು ಮಾಡುವುದೇ ನಮ್ಮ ಸಂಕಲ್ಪ. ರೈತರ ಬದುಕಿಗೆ ಆಧಾರವಾಗಿದ್ದೇವೆ’ ಎಂದು ಹೇಳಿದರು.

‘ನಮಗೆ ನೀರಿನ ಬೆಲೆ ಅರ್ಥವಾಗಬೇಕು ಎಂದರೆ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಹೋಗಿ ನೋಡಬೇಕು. ಆದರೂ ಅವರು ರೇಷ್ಮೆ, ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಈಗ ತರಕಾರಿ ಬೆಳೆಯುತ್ತಿದ್ದಾರೆ. ದೇವನಹಳ್ಳಿ ಭಾಗದಲ್ಲಿ ಈ ಹಿಂದೆ ದ್ರಾಕ್ಷಿ ಬೆಳೆಯುತ್ತಿದ್ದರು. ರೇಷ್ಮೆಗೂ ಉತ್ತಮ ಬೆಲೆ ಬಂದಿದೆ. ಹೂಗಳನ್ನು ಬೆಳೆದು ದೇವನಹಳ್ಳಿ ವಿಮಾನ ನಿಲ್ದಾಣದ ಮೂಲಕ ರಫ್ತು ಮಾಡುತ್ತಿದ್ದಾರೆ’ ಎಂದರು.

‘ಎತ್ತಿನಹೊಳೆಯಿಂದ ಬೆಂಗಳೂರು ಗ್ರಾಮಾಂತರ ಭಾಗಕ್ಕೆ ಶೀಘ್ರವೇ ಕುಡಿಯುವ ನೀರು ನೀಡಲಾಗುತ್ತದೆ. ಆ ನೀರಿನಿಂದ ಕೆರೆಗಳನ್ನು ತುಂಬಿಸಿದಾಗ ಅಂತರ್ಜಲವು ಸಹ ಹೆಚ್ಚಳವಾಗಲಿದೆ’ ಎಂದು ಜಲಸಂಪನ್ಮೂಲ ಸಚಿವರೂ ಆದ ಡಿ.ಕೆ. ಶಿವಕುಮಾರ್ ತಿಳಿಸಿದರು.

‘ನೆಲಮಂಗಲ ಶಾಸಕ ಶ್ರೀನಿವಾಸ್ ಅವರು ನೆಲಮಂಗಲಕ್ಕೆ ಮೆಟ್ರೊ ಬರಬೇಕು, ಒಳ ಚರಂಡಿ ವ್ಯವಸ್ಥೆ ಬರಬೇಕು, ಅಂತರ್ಜಲ ಹೆಚ್ಚಳವಾಗಬೇಕು, ರೈತರ, ಜನಸಾಮಾನ್ಯರ ಬದುಕು ಹಸನಾಗಬೇಕು ಎಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿಸಿದರು.

ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ‘ಬಿಜೆಪಿ ಸರ್ಕಾರದಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾಗಿದ್ದ ಜೆ.ಸಿ. ಮಾಧುಸ್ವಾಮಿ, ಶಾಸಕ ಎಸ್.ಆರ್.ವಿಶ್ವನಾಥ್ ಅವರೇ ವೃಷಭಾವತಿ ಕಣಿವೆ ಯೋಜನೆಯನ್ನು ಉತ್ತಮ ನೀರಾವರಿ ಯೋಜನೆ ಎಂದು ಒಪ್ಪಿದ್ದಾರೆ. ಕೇಂದ್ರ ನಿರಾವರಿ ಇಲಾಖೆ ಕಾರ್ಯದರ್ಶಿ ಯೋಜನೆಯನ್ನು ಚಿಕ್ಕಬಳ್ಳಾಪುರದಲ್ಲಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ, ಕರ್ನಾಟಕ ಮಾದರಿ ದೇಶದಲ್ಲೆಡೆ ವಿಸ್ತರಿಸುವುದಾಗಿ ತಿಳಿಸಿದ್ದಾರೆ. ಆದರೆ ಸ್ಥಳೀಯ ಬಿಜೆಪಿ ನಾಯಕರು ಮಾತ್ರ ವಿಷಪ್ರಾಶನ ಮಾಡುತ್ತಿದ್ದಾರೆ’ ಎಂದು ದೂರಿದರು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ಎನ್.ಶ್ರೀನಿವಾಸ್, ಬಸವಣ್ಣದೇವರ ಮಠದ ಸಿದ್ದಲಿಂಗ ಸ್ವಾಮೀಜಿ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ನಾರಾಯಣಗೌಡ, ನಗರಸಭೆ ಅಧ್ಯಕ್ಷ ಎನ್.ಗಣೇಶ್, ಉಪಾಧ್ಯಕ್ಷ ಆನಂದ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಆರ್.ಗೌಡ, ತಾಲ್ಲೂಕು ಸಮಿತಿ ಅಧ್ಯಕ್ಷ ವಜ್ರಘಟ್ಟ ನಾಗರಾಜು, ಮುಖಂಡ ಎಂ.ಕೆ.ನಾಗರಾಜು, ಸಿ.ಎಂ.ಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.