ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಿಶಾ ಬಂಧನ ಯುವಜನರಿಗೆ ಎಚ್ಚರಿಕೆಯ ಗಂಟೆ’

Last Updated 16 ಫೆಬ್ರುವರಿ 2021, 22:13 IST
ಅಕ್ಷರ ಗಾತ್ರ

ಬೆಂಗಳೂರು: ‘ರೈತರ ಪ್ರತಿಭಟನೆ ಬೆಂಬಲಿಸಿ ಟೂಲ್‌ ಕಿಟ್‌ ಸಿದ್ಧಪಡಿಸಿದ ಆರೋಪದಲ್ಲಿ ದಿಶಾ ರವಿ ಅವರನ್ನು ಬಂಧಿಸಿರುವುದು ಇಡೀ ಯುವ ಸಮುದಾಯಕ್ಕೆ ಎಚ್ಚರಿಕೆಯ ಗಂಟೆ. ಎಲ್ಲರ ಅಭಿಪ್ರಾಯ, ಅನಿಸಿಕೆಗಳನ್ನು ಮಟ್ಟಹಾಕಲು ಸರ್ಕಾರಗಳು ಪ್ರಯತ್ನಿ ಸುತ್ತಿವೆ. ಇದರ ವಿರುದ್ಧ ಪ್ರತಿಭಟನೆ ಅನಿವಾರ್ಯ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ದಿಶಾ ರವಿ ಬಂಧನದಿಂದ ಯುವ ಸಮುದಾಯ ದಿಗ್ಭ್ರಮೆಗೆ ಒಳಗಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಾಕ್ ಸ್ವಾತಂತ್ರ್ಯ ಪ್ರಮು ಖವಾದುದು. ನಮ್ಮ ಸಂವಿಧಾನ ಈ ಸ್ವಾತಂತ್ರ್ಯ ನೀಡಿದೆ. ಯುವಕರು ತಮ್ಮ ಸ್ವಾತಂತ್ರ್ಯ ವ್ಯಕ್ತಪಡಿಸದಂತೆ ಬಾಯಿ ಮುಚ್ಚಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮುಂದಾಗಿರುವುದು ಖಂಡನೀಯ’ ಎಂದರು.

‘ರಾಜ್ಯ ಹಾಗೂ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸುತ್ತಿವೆ. ಯುವಕರ ಧ್ವನಿ ಈ ದೇಶದ ಧ್ವನಿ. ಆದರೆ, ಈ ಧ್ವನಿ ದಮನಕ್ಕೆ ಸರ್ಕಾರಗಳು ಮುಂದಾಗಿವೆ. ಯುವಕರು ತಮ್ಮ ಹಕ್ಕು ರಕ್ಷಣೆಗೆ ಹೋರಾಟ ಮಾಡ ಬೇಕಾಗಿದೆ’ ಎಂದರು.

‘ಸರ್ಕಾರಕ್ಕೆ ನಾಯಕರು, ರಾಜ ಕೀಯ ಪಕ್ಷಗಳು, ಸಾರ್ವಜನಿಕ ಸಂಘಟನೆಗಳು, ಎನ್‌ಜಿಒಗಳು, ಮಾಧ್ಯಮಗಳು ಸೇರಿದಂತೆ ಯಾರು ಬೇಕಾದರೂ ಮಾರ್ಗದರ್ಶನ ನೀಡ ಬಹುದು. ಬಾಯಿ ಮುಚ್ಚಿಸಲು ಯಾರಿಂ ದಲೂ ಸಾಧ್ಯವಿಲ್ಲ. ಎಲ್ಲ ಯುವಕರು ಎದ್ದೇಳಬೇಕು, ಮಾಧ್ಯಮ ಸ್ನೇಹಿತರು ಕೂಡ ನಿಮ್ಮ ಸ್ವಾತಂತ್ರ್ಯ ಕಾಪಾಡಿಕೊಳ್ಳ ಬೇಕು’ ಎಂದರು.

‘ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ’
‘ಕೇಂದ್ರ ಸರ್ಕಾರದ ವಿರುದ್ಧ ಧ್ವನಿಯೆತ್ತಿದವರ ಮೇಲೆ ದೇಶದ್ರೋಹದ ಆರೋಪ ಹೊರಿಸಿ, ಜೈಲಿಗೆ ಕಳುಹಿಸುತ್ತಿರುವುದು ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ’ ಎಂದು ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಖಂಡಿಸಿದ್ದಾರೆ.

ದಿಶಾ ರವಿ ಬಂಧನ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ‘ಕೃಷಿ ಕಾಯ್ದೆ ಗಳನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಧ್ವನಿಯೆತ್ತಿದ ಕಾರಣಕ್ಕೆ ದಿಶಾ ಅವರನ್ನು ಬಂಧಿಸಲಾಗಿದೆ. ಇದು ಅಕ್ಷಮ್ಯ ಅಪರಾಧ ಮತ್ತು ಖಂಡನೀಯ. ರೈತರನ್ನು ಕಾರ್ಪೊರೇಟ್ ಕಂಪನಿಗಳ ನಿಯಂತ್ರಣಕ್ಕೆ ಸಿಲುಕಿಸುತ್ತಿರುವುದರ ವಿರುದ್ಧ ಧ್ವನಿಯೆತ್ತಿದರೆ ಭಯ ಹುಟ್ಟಿಸುವಂತಹ ಕೆಲಸ ಮಾಡಲಾಗುತ್ತಿದೆ. ಪರೋಕ್ಷವಾಗಿ ರೈತರ ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನ ಇದಾಗಿದೆ’ ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

’ಕೇಂದ್ರವು ಕೂಡಲೇ ಅವರನ್ನು ಬಿಡುಗಡೆಗೊಳಿಸಿ, ಗಂಭೀರ ಪ್ರಕರಣಗಳಿ ದ್ದರೆ ನ್ಯಾಯೋಚಿತ ತನಿಖೆಗೆ ಮುಂದಾಗಬೇಕು’ ಎಂದೂ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT