ಬುಧವಾರ, ಅಕ್ಟೋಬರ್ 28, 2020
28 °C

ಬಾಲಕಿ ದೇಹದಿಂದ 25 ಲೀ. ನೀರು ಹೊರ ತೆಗೆದ ವೈದ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ 12 ವರ್ಷದ ಬಾಲಕಿಯ ದೇಹದಿಂದ ಮಾರತ್ತಹಳ್ಳಿಯ ರೈನ್ ಬೋ ಮಕ್ಕಳ ಆಸ್ಪತ್ರೆಯ ವೈದ್ಯರು 25 ಲೀಟರ್ ನೀರು ಹೊರತೆಗೆದು, ಚಿಕಿತ್ಸೆ ನೀಡಿದ್ದಾರೆ. 

ಆಂಧ್ರಪ್ರದೇಶದ ಚಿತ್ತೂರಿನ ಬಾಲಕಿ ಕೆಲ ದಿನಗಳ ಹಿಂದೆ ಮೂತ್ರಪಿಂಡ ಸಮಸ್ಯೆಯಿಂದಾಗಿ ದೇಹದ ತೂಕ ಹೆಚ್ಚಿಸಿಕೊಂಡಿದ್ದಳು. ದೇಹದಲ್ಲಿ ನೀರು ತುಂಬಿದ ಪರಿಣಾಮ ಹೊಟ್ಟೆಯ ಭಾಗ ಊದಿಕೊಂಡಿತ್ತು. ಉಸಿರಾಟದ ಸಮಸ್ಯೆಯನ್ನೂ ಎದುರಿಸುತ್ತಿದ್ದಳು. ಬಾಲಕಿ ಮೂತ್ರಪಿಂಡದ  ಸಮಸ್ಯೆ ಎದುರಿಸುತ್ತಿರುವುದನ್ನು ಆಸ್ಪತ್ರೆಯ ವೈದ್ಯರು ಪತ್ತೆಹಚ್ಚಿದ್ದರು.

‘ 25 ಲೀಟರ್ ನೀರು ತೆಗೆಯಲು ಸತತ ಐದು ದಿನ ಶ್ರಮಿಸಬೇಕಾಯಿತು. ಬಾಲಕಿ ಈಗ ಚೇತರಿಸಿಕೊಂಡಿದ್ದಾಳೆ’ ಎಂದು ಮಕ್ಕಳ ಮೂತ್ರಪಿಂಡ ಕಾಯಿಲೆಗಳ ತಜ್ಞ ಡಾ.ಶೌಮಿಲ್ ಗೌರ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು