ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣಗಿದ ಮರ: ಮಾಹಿತಿ ನೀಡಿ

Published 17 ಮೇ 2024, 21:08 IST
Last Updated 17 ಮೇ 2024, 21:08 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ರಸ್ತೆಗಳಲ್ಲಿ ಒಣಗಿರುವ ಮರ, ಕೊಂಬೆಗಳ ಮಾಹಿತಿ ನೀಡಲು ಬಿಬಿಎಂಪಿ ಅರಣ್ಯ ವಿಭಾಗ ನಾಗರಿಕರಲ್ಲಿ ಮನವಿ ಮಾಡಿದೆ.

ಮಳೆ–ಗಾಳಿಯಿಂದ ನಗರದ ಹಲವೆಡೆ ಒಣಗಿರುವ ಮರ ಹಾಗೂ ಕೊಂಬೆಗಳು ಆಕಸ್ಮಿಕವಾಗಿ ಬೀಳುತ್ತಿವೆ. ಇದರಿಂದ ಸಾಕಷ್ಟು ಹಾನಿಯಾಗುತ್ತಿದೆ. ಆದ್ದರಿಂದ ನಾಗರಿಕರು ತಮ್ಮ ಸುತ್ತಮುತ್ತ ಕಂಡುಬರುವ ಒಣಗಿರುವ ಮರ ಹಾಗೂ ಕೊಂಬೆಗಳ ಮಾಹಿತಿಯನ್ನುಅರಣ್ಯ ವಿಭಾಗದ ಅಧಿಕಾರಿಗಳ ಮೊಬೈಲ್‌ಗೆ ಕರೆ ಮಾಡಿ ಅಥವಾ ವಾಟ್ಸ್‌ ಆ್ಯಪ್‌ನಲ್ಲಿ ಚಿತ್ರಸಹಿತ ವಿಳಾಸವನ್ನು ಕಳುಹಿಸಬೇಕು. ಅಪಾಯಕಾರಿ ಮರ, ಕೊಂಬೆಗಳನ್ನು ತೆರವುಗೊಳಿಸಲಾಗುತ್ತದೆ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಲ್‌.ಜಿ. ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರಣ್ಯ ಅಧಿಕಾರಿಗಳ ಸಂಪರ್ಕ: ಪೂರ್ವ ವಲಯ– 9380090027, ಪಶ್ಚಿಮ– 9449659252, ದಕ್ಷಿಣ– 94806885039, ದಾಸರಹಳ್ಳಿ– 9164042566, ಬೊಮ್ಮನಹಳ್ಳಿ– 9580685399, ಯಲಹಂಕ– 9164042566,
ಆರ್.ಆರ್‌. ನಗರ– 7760553545, ಮಹದೇವಪುರ ವಲಯ– 8147276414.

ಉಚಿತ ಸಸಿ: ಬಿಬಿಎಂಪಿ ಅರಣ್ಯ ವಿಭಾಗದ ವತಿಯಿಂದ ಪರಿಸರ ಕಾಳಜಿ ಉತ್ತೇಜಿಸಲು ಸಸ್ಯ ಕ್ಷೇತ್ರಗಳಲ್ಲಿ ವಿವಿಧ ಜಾತಿಯ ಸಸಿಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ನಾಗರಿಕರು ಹಾಗೂ ಸಂಘ–ಸಂಸ್ಥೆಗಳು ಅರ್ಜಿ ಸಲ್ಲಿಸಿ ಸಸಿಗಳನ್ನು ಪಡೆಯಬಹುದು.

ಕೆಂಪಾಪುರ ಸಸ್ಯಕ್ಷೇತ್ರ– 9480685541, ಕೂಡ್ಲು ಸಸ್ಯಕ್ಷೇತ್ರ– 9480685539, ಅಟ್ಟೂರು ಸಸ್ಯಕ್ಷೇತ್ರ– 9483139438, ಜ್ಞಾನಭಾರತಿ ಸಸ್ಯಕ್ಷೇತ್ರ– 9880516322.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT