ಬೆಂಗಳೂರು: ‘ಕನ್ನಡದ ಚಿಂತನೆಗಳಿಗೆ ಡಿ.ಆರ್. ನಾಗರಾಜ್ ಅವರು ಹೊಸ ತಾತ್ವಿಕ ಮಾದರಿಗಳನ್ನು ನೀಡಿದರು. ಅವರು ಕಾಲದ ಪರೀಕ್ಷೆ ಗೆದ್ದ ಜ್ಞಾನಿ’ ಎಂದು ಶಾಸಕ ಕೆ.ಆರ್. ರಮೇಶ್ ಕುಮಾರ್ ತಿಳಿಸಿದರು.

ಸಂಸ ಥಿಯೇಟರ್ ನಗರದಲ್ಲಿ ಹಮ್ಮಿಕೊಂಡ ಡಿ.ಆರ್. ನಾಗರಾಜ್ 67 ಕಾರ್ಯಕ್ರಮದಲ್ಲಿ ಕಿರಂ ಪ್ರಕಾಶನ ಹೊರತಂದ ‘ಅನನ್ಯ ಪ್ರತಿಭೆಯ ಪರಿ’ ವಿಮರ್ಶಾ ಬರಹಗಳ ಸಂಕಲನವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ನಾನು ಡಿ.ಆರ್. ನಾಗರಾಜ್ ಅವರನ್ನು ಮೊದಲ ಬಾರಿಗೆ ಪಿ. ಲಂಕೇಶ್ ಅವರ ಕಚೇರಿಯಲ್ಲಿ ನೋಡಿದ್ದೆ. 1994ರಲ್ಲಿ ವಿಧಾನ ಸಭಾಧ್ಯಕ್ಷನಾಗಿದ್ದಾಗ ಬೆಂಗಳೂರು ವಕೀಲರ ಸಂಘವು ಭ್ರಷ್ಟಾಚಾರ ವಿಷಯಕ್ಕೆ ಸಂಬಂಧಿಸಿದಂತೆ ಆಯೋಜಿಸಿದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ, ‘ಸೃಷ್ಟಿಯಲ್ಲಿ ಕಾಗದ ತಿನ್ನುವ ಪ್ರಾಣಿ ಕತ್ತೆ ಮಾತ್ರ. ಹಾಗಾಗಿ, ಹಣವನ್ನು ತಿನ್ನುವವರೆಲ್ಲ ಕತ್ತೆಗಳು’ ಎಂದು ಹೇಳಿದೆ. ಪತ್ರಿಕೆಗಳಲ್ಲಿ ಇದು ದೊಡ್ಡ ಸುದ್ದಿಯಾಯಿತು. ಆಗ ದೂರವಾಣಿ ಕರೆ ಮಾಡಿದ ನಾಗರಾಜ್, ‘ರಾಜ್ಯದಲ್ಲಿ ಇಂತಹ ಕತ್ತೆಗಳು ಎಷ್ಟಿವೆ ಎಂದು ಅಂದಾಜಿದೆಯೇ ನಿಮಗೆ’ ಎಂದು ಪ್ರಶ್ನಿಸಿದ್ದರು. ಜಗತ್ತಿನ ಎಲ್ಲ ವಿಚಾರಗಳನ್ನು ತಿಳಿದುಕೊಂಡಿದ್ದ ಅವರು 46ನೇ ವಯಸ್ಸಿಗೆ ನಮ್ಮಿಂದ ದೂರವಾದರು’ ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಜಾಫೆಟ್ ಮಾತನಾಡಿ, ‘ನನಗೆ ತಾತ್ವಿಕ ಆಯಾಮ ಕಲಿಸಿದ ಗುರು ಅವರು. ನನ್ನ ಮತ್ತು ಅವರ ಸಂಬಂಧ ಬಸವಣ್ಣ ಹಾಗೂ ಅಲ್ಲಮಫ್ರಭುವಿನ ಸಂಬಂಧದಂತಿತ್ತು. ಅವರು ಜ್ಞಾನದ ಮೂಲಕ ಅಮರತ್ವ ಪಡೆದಿದ್ದಾರೆ’ ಎಂದರು.

ವಿಮರ್ಶಾ ಬರಹಗಳ ಸಂಕಲನ ಕುರಿತು ಮಾತನಾಡಿದ ಸಂಸ್ಕೃತಿ ಚಿಂತಕ ಅಗ್ರಹಾರ ಕೃಷ್ಣಮೂರ್ತಿ, ‘ನಾಗರಾಜ್ ಅವರ ವಿಮರ್ಶೆಯ ಚಿಂತನೆಗಳು ಇಂದಿಗೂ ಪ್ರಸಿದ್ಧವಾಗಿವೆ. ಅನೇಕ ಯುವ ವಿಮರ್ಶಕರನ್ನು, ಚಿಂತಕರನ್ನು ಬೆಳೆಸುವಲ್ಲಿ ಸಹಾಯಕವಾಗಿವೆ. ಈ ಕೃತಿಯು ಕನ್ನಡ ವಿಮರ್ಶಾ ಜಗತ್ತಿಗೆ ಬಹುಮುಖ್ಯವಾದ ಕೃತಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಮರ್ಶಕಿ ಎಂ.ಎಸ್. ಆಶಾದೇವಿ, ‘ನನ್ನ ಆಲೋಚನೆ ಮತ್ತು ಬರವಣಿಗೆಯನ್ನು ಸಂಪೂರ್ಣವಾಗಿ ಬದಲಿಸಿದ ಅವರು, ನನ್ನ ವ್ಯಕ್ತಿತ್ವವನ್ನು ಒಡೆದು ಕೂಡಿಸಿದರು. ಯು.ಆರ್. ಅನಂತಮೂರ್ತಿ ಹೇಳಿದಂತೆ ಡಿ.ಆರ್.ಎನ್. ತೃತೀಯ ಜಗತ್ತಿನ ದಾರ್ಶನಿಕ
ರಾಗಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.