ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಬ್ಬರಿ ಎಣ್ಣೆ ಬಾಟಲಿಯಲ್ಲಿ ‘ಡ್ರಗ್’

ಸಿಸಿಬಿ ಕಾರ್ಯಾಚರಣೆ: ಕೇರಳದ ವಿದ್ಯಾರ್ಥಿ ಸೇರಿ ಮೂವರ ಬಂಧನ
Last Updated 5 ಸೆಪ್ಟೆಂಬರ್ 2020, 18:32 IST
ಅಕ್ಷರ ಗಾತ್ರ

ಬೆಂಗಳೂರು: ಆಂಧ್ರಪ್ರದೇಶದಿಂದ ಪ್ಯಾರಾಚೂಟ್ ಕೊಬ್ಬರಿ ಎಣ್ಣೆ ಬಾಟಲಿಗಳಲ್ಲಿ ಡ್ರಗ್ ಸಾಗಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದ ಕೇರಳದ ವಿದ್ಯಾರ್ಥಿ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ವಿದೂಸ್ (31), ಎ.ಸುಬ್ರಮಣಿ (26) ಹಾಗೂ ಶೆಜಿನ್ ಜಾನ್ ಮ್ಯಾಥ್ಯೂ (21) ಬಂಧಿತರು. ಅವರಿಂದ ₹ 44 ಲಕ್ಷ ಮೌಲ್ಯದ ಡ್ರಗ್ ಜಪ್ತಿ ಮಾಡಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಆರೋಪಿ ವಿದೂಸ್, ಎಂ.ಎಸ್ಸಿ ವಿದ್ಯಾರ್ಥಿ. ಐಷಾರಾಮಿ ಜೀವನ ನಡೆಸುವುದಕ್ಕಾಗಿ ಇತರೆ ಆರೋಪಿಗಳ ಜೊತೆ ಸೇರಿಕೊಂಡು ಡ್ರಗ್ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಆತನ ಮನೆ ಮೇಲೆ ದಾಳಿ ಮಾಡಿ ಬಂಧಿಸಿದ್ದಾರೆ’ ಎಂದರು.

’ಆಂಧ್ರಪ್ರದೇಶದಲ್ಲಿರುವ ಪೆಡ್ಲರ್ ಜೊತೆಯಲ್ಲಿ ಸಂಪರ್ಕವಿಟ್ಟುಕೊಂಡಿದ್ದ ಆರೋಪಿಗಳು, ಅವರಿಂದಲೇ ಹ್ಯಾಶಿಶ್ ಎಣ್ಣೆ ಹಾಗೂ ಗಾಂಜಾ ಖರೀದಿಸುತ್ತಿದ್ದರು. ಪೊಲೀಸರಿಗೆ ಅನುಮಾನ ಬರಬಾರದೆಂದು ಪ್ಯಾರಾಚೂಟ್ ಕೊಬ್ಬರಿ ಎಣ್ಣೆ ಬಾಟಲಿಗಳಲ್ಲಿ ಡ್ರಗ್ ತುಂಬಿಸಿ ನಗರಕ್ಕೆ ತರುತ್ತಿದ್ದರು. ಅವುಗಳನ್ನು ಕೆಲ ಖಾಸಗಿ ಕಂಪನಿ ಉದ್ಯೋಗಿಗಳಿಗೆ ಹಾಗೂ ಕೆಲ ವಿದ್ಯಾರ್ಥಿಗಳಿಗೆ ಮಾರುತ್ತಿದ್ದರು’ ಎಂದೂ ಕಮಲ್ ಪಂತ್ ಹೇಳಿದರು.

‘2,133 ಗ್ರಾಂ ಹ್ಯಾಶಿಶ್ ಎಣ್ಣೆ ಹಾಗೂ 2 ಕೆ.ಜಿ ಗಾಂಜಾ ಆರೋಪಿಗಳ ಬಳಿ ಸಿಕ್ಕಿದೆ. 105 ಖಾಲಿ ಪ್ಯಾರಾಚೂಟ್ ಬಾಟಲಿಗಳು, ತೂಕದ ಯಂತ್ರವನ್ನೂ ಜಪ್ತಿ ಮಾಡಲಾಗಿದೆ. ಆರೋಪಿಗಳ ವಿರುದ್ಧ ಕೆ.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಾಲದಲ್ಲಿ ಭಾಗಿಯಾಗಿರುವ ಮತ್ತಷ್ಟು ಆರೋಪಿಗಳಾಗಿ ಹುಡುಕಾಟ ನಡೆದಿದೆ’ ಎಂದೂ ಅವರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT