ಶುಕ್ರವಾರ, ಜುಲೈ 1, 2022
28 °C

ಡ್ರಗ್ಸ್‌ ಖರೀದಿಗೆ ಬಿಟ್‌ ಕಾಯಿನ್‌ ಬಳಕೆ: ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಟ್‌ ಕಾಯಿನ್‌ ಮೂಲಕ ಹಣ ಪಾವತಿಸಿ ಡಾರ್ಕ್‌ನೆಟ್‌ನಲ್ಲಿ ಮಾದಕ ವಸ್ತು ಕಾಯ್ದಿರಿಸುತ್ತಿದ್ದ, ಬಳಿಕ ಅದನ್ನು ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

‘ಕೇರಳದ ಮೊಹಮ್ಮದ್‌ ರನ್ನಾರ್ (27) ಬಂಧಿತ. ಈತನಿಂದ 49.30 ಗ್ರಾಂ ತೂಕದ 90 ಎಕ್ಸ್‌ಟಸಿ ಮಾತ್ರೆ, 40 ಗ್ರಾಂ ಚರಸ್‌, 5 ಗ್ರಾಂ ಎಂ.ಡಿ.ಎಂ.ಎ. ಕ್ರಿಸ್ಟಲ್‌, ಕೃತ್ಯಕ್ಕೆ ಬಳಸಿದ್ದ ತಲಾ ಒಂದು ಲ್ಯಾಪ್‌ಟಾ‍ಪ್‌, ಮೊಬೈಲ್‌ ಹಾಗೂ ಎಲೆಕ್ಟ್ರಾನಿಕ್ ತೂಕದ ಯಂತ್ರ ಜಪ್ತಿ ಮಾಡಲಾಗಿದೆ. ಇವುಗಳ ಒಟ್ಟು ಮೌಲ್ಯ ₹6.5 ಲಕ್ಷ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಆರೋಪಿಯು ನಗರದ ಕಾಲೇಜು ವಿದ್ಯಾರ್ಥಿಗಳು, ಪರಿಚಯಸ್ಥರು ಹಾಗೂ ಐಟಿ ಕಂಪನಿ ಉದ್ಯೋಗಿಗಳಿಗೆ ಮಾದಕ ವಸ್ತು ಮಾರುತ್ತಿದ್ದ. 1 ಗ್ರಾಂ ಎಂ.ಡಿ.ಎಂ.ಎ. ಕ್ರಿಸ್ಟಲ್‌ಗೆ ₹8 ಸಾವಿರದಿಂದ ₹10 ಸಾವಿರ ದರ ನಿಗದಿ ಮಾಡು ತ್ತಿದ್ದ. 1 ಗ್ರಾಂ ಚರಸ್‌ ಅನ್ನು ₹1 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ. 1 ಎಕ್ಸ್‌ಟಸಿ ಮಾತ್ರೆಗೆ ₹7 ಸಾವಿರ ಪಡೆಯುತ್ತಿದ್ದ. ಈತನ ವಿರುದ್ಧ ಹೆಣ್ಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು