ಬೆಂಗಳೂರು: ನಗರದ ಆಸ್ತಿ ಮಾಲೀಕರಿಗೆ ತ್ವರಿತಗತಿಯಲ್ಲಿ ಇ–ಖಾತಾ ತಲುಪಿಸಲು ಉದ್ಯಮಿಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಯುವ/ಸ್ಥಳೀಯ ಖಾಸಗಿ ಉದ್ಯಮಿಗಳು ಪಾಲಿಕೆಯ ವೆಬ್ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಆ ನಂತರ ನಾಗರಿಕರಿಗೆ ಇ-ಖಾತಾ ಸೇವೆಗಳನ್ನು ನೀಡಿ ಆದಾಯ ಗಳಿಸಬಹುದು ಎಂದು ಹೇಳಿದರು.

ಇ-ಖಾತಾಗಾಗಿ ದತ್ತಾಂಶ ನಮೂದನೆ, ಸ್ವೀಕೃತಿ ಪ್ರತಿ (ಕಪ್ಪು-ಬಿಳುಪು) ಹಾಗೂ ಇ-ಆಸ್ತಿ ಸಲ್ಲಿಸಲು ಒಟ್ಟು ವಹಿವಾಟು ಶುಲ್ಕಕ್ಕಾಗಿ ಉದ್ಯಮಿಗೆ ಪ್ರತಿ ಇ-ಖಾತಾಗೆ ₹45 ಪಾವತಿಸಬೇಕು.

ಆಸ್ತಿ ದಾಖಲೆಗಳು/ಗುರುತಿನ ಚೀಟಿ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ಬಿಬಿಎಂಪಿ ತಂತ್ರಾಂಶದಲ್ಲಿ ಅಪ್ಲೋಡ್ ಮಾಡುವುದಕ್ಕೆ ಉದ್ಯಮಿಗೆ ಪ್ರತಿ ಪುಟಕ್ಕೆ ₹45 ಪಾವತಿಸಬೇಕು.

ಅಂತಿಮ ಇ-ಖಾತಾ ಮುದ್ರಣಕ್ಕಾಗಿ ಉದ್ಯಮಿಗೆ ಪ್ರತಿ ಇ-ಖಾತಾಗೆ ₹45 ಪಾವತಿಸಬೇಕು. ಪಾಲಿಕೆಗೆ ಪ್ರತಿ ಅಂತಿಮ ಇ-ಖಾತಾಗೆ ಆನ್ಲೈನ್ ಮೂಲಕ ₹125 ಪಾವತಿಸಬೇಕು.

ಇ-ಖಾತಾ ತಿದ್ದುಪಡಿ, ಮ್ಯುಟೆಷನ್ ಅಥವಾ ಯಾವುದೇ ಇತರೆ ಅರ್ಜಿ ಸಲ್ಲಿಸುವುದಕ್ಕಾಗಿ ಉದ್ಯಮಿಗೆ ಪ್ರತಿ ಇ-ಖಾತಾಗೆ ₹45 ಪಾವತಿಸಬೇಕು. ಪಾಲಿಕೆಗೆ ಮ್ಯುಟೆಷನ್ ಶುಲ್ಕವನ್ನು ಪಾವತಿಸಬೇಕು ಎಂದು ಮುನೀಶ್ ಮಾಹಿತಿ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ಟೋಬರ್ 1ರಿಂದ 2.25 ಲಕ್ಷ ಅಂತಿಮ ಇ-ಖಾತಾಗಳನ್ನು ಪಡೆದುಕೊಳ್ಳಲಾಗಿದೆ ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಿಸುವ ಕುರಿತು ಹೆಚ್ಚು ಗಮನ ನೀಡಿ, 2024-25ನೇ ಆರ್ಥಿಕ ವರ್ಷದ ಅಂತ್ಯಕ್ಕೆ ಬಾಕಿ ಇರುವ ತೆರಿಗೆಯನ್ನು ಕೂಡಲೇ ಸಂಗ್ರಹಿಸಬೇಕು ಎಂದು ಅಧಿಕಾರಿಗಳಿಗೆ ವರ್ಚ್ಯುವಲ್ ಸಭೆಯಲ್ಲಿ ಮುನೀಶ್ ಮೌದ್ಗಿಲ್ ಸೂಚಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ ₹5,210 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ₹4,604 ಕೋಟಿ ಸಂಗ್ರಹಿಸಿ, ಶೇ 88.36ರಷ್ಟು ಸಾಧನೆ ಮಾಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.