ಬುಧವಾರ, ಮಾರ್ಚ್ 29, 2023
24 °C

ಬೆಂಗಳೂರು ಮಳೆಯಿಂದ ಇ–ಕಾಮರ್ಸ್, ಫುಡ್ ಡೆಲಿವರಿ ಕಂಪನಿಗಳ ಪರದಾಟ!

ಪಿಟಿಐ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಳೆದ ಒಂದು ವಾರದಲ್ಲಿ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದ ಅಮೆಜಾನ್, ಫ್ಲಿಫ್‌ಕಾರ್ಟ್‌ನಂತಹ ಇ–ಕಾಮರ್ಸ್‌ ಹಾಗೂ ಜೊಮಾಟೊ, ಸ್ವಿಗ್ಗಿ ಅಂತಹ ಫುಡ್ ಡೆಲಿವರಿ ಕಂಪನಿಗಳಿಗೆ ನಷ್ಟ ಆಗಿದೆ. ಅಲ್ಲದೇ ಡೆಲಿವರಿ ಬಾಯ್‌ಗಳಿಗೆ ಸಾಕಷ್ಟು ತೊಂದರೆ ಉಂಟಾಗಿದೆ.

ಅದರಲ್ಲೂ ಬೆಂಗಳೂರು ಪೂರ್ವದ ಸರ್ಜಾಪುರ, ಯಮಲೂರು, ಬೆಳಂದೂರು, ವರ್ತೂರು, ಹೊರವರ್ತುಲ ರಸ್ತೆ, ವೈಟ್‌ಫಿಲ್ಡ್ ಸೇರಿದಂತೆ ಇತರ ಜನಸಂದಣಿಯ ಪ್ರದೇಶಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ಆ ಪ್ರದೇಶಗಳಿಗೆ ಕಳೆದ ಒಂದು ವಾರದಿಂದ ಸೇವೆ ತಲುಪಿಸಲು ಇ–ಕಾಮರ್ಸ್ ಹಾಗೂ ಫುಡ್ ಡೆಲಿವರಿ ಕಂಪನಿಗಳಿಗೆ ಸಾಧ್ಯ ಆಗಿಲ್ಲ ಎಂದು ಅವು ಅಸಹಾಯಕತೆ ವ್ಯಕ್ತಪಡಿಸಿವೆ.

‘ಕಳೆದ ಮೂರು ದಿನದಿಂದ ಭಾರಿ ಮಳೆಯಿಂದಾಗಿ ಬೆಂಗಳೂರಿನ ಕೆಲ ಪ್ರದೇಶಗಳಿಗೆ ಸೇವೆ ನೀಡಲು ಸಾಧ್ಯವಾಗಿಲ್ಲ’ ಎಂದು ಪ್ರಮುಖ ಇ–ಕಾಮರ್ಸ್ ಕಂಪನಿಯೊಂದು ತಿಳಿಸಿದೆ.

 

‘ಪ್ರವಾಹ ಉಂಟಾಗಿರುವ ಪ್ರದೇಶಗಳಲ್ಲಿ ಸೇವೆಯನ್ನು ಸದ್ಯ ನೀಡಲಾಗುತ್ತಿಲ್ಲ. ಏಕೆಂದರೆ, ನಮ್ಮ ಡೆಲಿವರಿ ಬಾಯ್‌ಗಳ ಸುರಕ್ಷತೆಯೇ ನಮಗೆ ಮುಖ್ಯ. ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ’ ಎಂದು ಅಮೆಜಾನ್ ವಕ್ತಾರರು ತಿಳಿಸಿದ್ದಾರೆ.

‘ನೀರು ನುಗ್ಗಿರುವ ಪ್ರದೇಶಗಳಿಗೆ ಸೇವೆ ನೀಡಲಾಗಿಲ್ಲ. ಸದ್ಯ ಪರಿಸ್ಥಿತಿ ಸುಧಾರಿಸುತ್ತಿದೆ. ಪ್ರವಾಹ ಪರಿಸ್ಥಿತಿಯಲ್ಲಿ ನಮ್ಮ ಗ್ರಾಹಕರಿಗೆ ಸೇವೆ ನೀಡದಿರುವುದಕ್ಕೆ ಕ್ಷಮೆ ಕೇಳುತ್ತೇವೆ’ ಎಂದು ಸ್ವಿಗ್ಗಿ ವಕ್ತಾರರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು