ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌: ಎಂಟು 'ಇನ್‌ಸೆಕ್ಟ್‌ ಕೆಫೆ'ಗಳ ಅನಾವರಣ

Published 19 ಏಪ್ರಿಲ್ 2024, 15:18 IST
Last Updated 19 ಏಪ್ರಿಲ್ 2024, 15:18 IST
ಅಕ್ಷರ ಗಾತ್ರ

ಬೆಂಗಳೂರು: ನಿಸರ್ಗದ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುವ ದುಂಬಿ–ಕೀಟಗಳ ಸಂರಕ್ಷಣೆಗಾಗಿ ‘ಇನ್‌ಸೆಕ್ಟ್‌ ಕೆಫೆ’ ಎಂಬ ಎಂಟು ವಿಶಿಷ್ಟ ಕೀಟ ತಾಣಗಳನ್ನು ಲಾಲ್‌ಬಾಗ್‌ನಲ್ಲಿ ಶುಕ್ರವಾರ ಅನಾವರಣಗೊಳಿಸಲಾಯಿತು.

‘ಇವೈ ಗ್ಲೋಬಲ್‌ ಡೆಲಿವರಿ ಸರ್ವಿಸಸ್‌ (ಇವೈ ಜಿಡಿಎಸ್‌), ವಿಭಿನ್ನ ಇಂಡಿಯಾ ಫೌಂಡೇಷನ್‌ನ ಸಹಯೋಗದಲ್ಲಿ ಬೆಂಗಳೂರಿನಲ್ಲಿರುವ ಉದ್ಯಾನಗಳಲ್ಲಿ 21 ಇನ್‌ಸೆಕ್ಟ್‌ ಕೆಫೆಗಳನ್ನು ನಿರ್ಮಿಸುವ ಉದ್ದೇಶವಿದೆ. ಈಗಾಗಲೇ ಲಾಲ್‌ಬಾಗ್‌ನಲ್ಲಿ ಎಂಟು ಕೀಟ ತಾಣಗಳನ್ನು ನಿರ್ಮಿಸಲಾಗಿದೆ. ಮೇ ತಿಂಗಳಲ್ಲಿ ಕಬ್ಬನ್‌ ಉದ್ಯಾನದಲ್ಲಿಯೂ ಎಂಟು ಇನ್‌ಸೆಕ್ಟ್‌ ಕೆಫೆಗಳನ್ನು ಪ್ರಾರಂಭಿಸಲಾಗುವುದು’ ಎಂದು ಇವೈ ಜಿಡಿಎಸ್‌ನ ಸಿಎಸ್‌ಆರ್‌ ವಿಭಾಗದ ನಿರ್ದೇಶಕಿ ರೂಮಿ ಮಲಿಕ್ ಮಿತ್ರಾ ಮಾಹಿತಿ ನೀಡಿದರು.

‘ಮರುಬಳಕೆ ಮಾಡಿದ ಮರ, ಮಣ್ಣು ಹಾಗೂ ಬಿದಿರಿನಿಂದ ಇನ್‌ಸೆಕ್ಟ್‌ ಕೆಫೆಗಳನ್ನು ತಯಾರಿಸಲಾಗಿದೆ. ಇವುಗಳನ್ನು ಪ್ರಮುಖ ಉದ್ಯಾನಗಳಲ್ಲಿ ಸ್ಥಾಪಿಸುವುದರಿಂದ ವಿವಿಧ ಪ್ರಬೇಧಗಳ ಕೀಟಗಳಿಗೆ ಸುರಕ್ಷಿತ ತಾಣವಾಗುತ್ತವೆ’ ಎಂದು ತಿಳಿಸಿದರು.‌

ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ್, ‘ಕೀಟಗಳನ್ನು ಸಂರಕ್ಷಿಸಿ ಪೋಷಿಸುವ ನಿಟ್ಟಿನಲ್ಲಿ ಇನ್‌ಸೆಕ್ಟ್‌ ಕೆಫೆ ಯೋಜನೆ ಸಹಕಾರಿಯಾಗಿದೆ. ಕೀಟಗಳ ಸಂತಾನೋತ್ಪತ್ತಿ ಮತ್ತು ಉಳಿವಿಗಾಗಿ ಸುರಕ್ಷಿತವಾದ ಗೂಡುಗಳಿಲ್ಲದ ಪರಿಣಾಮ ಅನೇಕ ಕೀಟಗಳು ಅಪಾಯದ ಅಂಚಿನಲ್ಲಿವೆ. ಆದ್ದರಿಂದ, ಇವುಗಳ ಸಂರಕ್ಷಿಸುವುದರ ಜೊತೆಗೆ ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಇನ್‌ಸೆಕ್ಟ್‌ ಕೆಫೆಗಳನ್ನು ಸಾರ್ವಜನಿಕರು ತಮ್ಮ ಮನೆಗಳಲ್ಲಿರುವ ಖಾಲಿ ಸ್ಥಳಗಳಲ್ಲಿಯೂ ಸ್ಥಾಪಿಸಬಹುದು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT