ಬೆಂಗಳೂರು: ಮಹದೇವಪುರ ವಲಯದ ವಿವಿಧ ರಸ್ತೆಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ನಡೆಸಿದ್ದು, 72 ತಾತ್ಕಾಲಿಕ ಮತ್ತು 2 ಶಾಶ್ವತ ಒತ್ತುವರಿ ತೆರವುಗೊಳಿಸಿದೆ.

‘ಗ್ರೀನ್ಗ್ಲೆನ್ ಲೇಔಟ್ ರಸ್ತೆಯಲ್ಲಿ ಸುಮಾರು 3 ಕಿಲೋ ಮೀಟರ್ ಉದ್ದದ ಪಾದಚಾರಿ ಮಾರ್ಗ ಒತ್ತುವರಿಯಾಗಿತ್ತು. ಅಲ್ಲಿ ರಸ್ತೆ ಬದಿ ನಿರ್ಮಾಣವಾಗಿದ್ದ 30 ತಾತ್ಕಾಲಿಕ ಹಾಗೂ 2 ಶಾಶ್ವತ ಒತ್ತುವರಿ ತೆರವುಗೊಳಿಸಲಾಗಿದೆ’ ಎಂದು ಬಿಬಿಎಂಪಿ ಮಹದೇವಪುರ ವಲಯ ಮುಖ್ಯ ಎಂಜಿನಿಯರ್ ಆರ್.ಎಲ್.ಪರಮೇಶ್ವರಯ್ಯ ತಿಳಿಸಿದ್ದಾರೆ.

ಮಾರತಹಳ್ಳಿ ಯಮಲೂರು ಸಿಗ್ನಲ್ನಿಂದ ಮಾರತಹಳ್ಳಿ ಮೇಲ್ಸೇತುವೆ ತನಕ ಒಂದೂವರೆ ಕಿಲೋ ಮೀಟರ್ನಲ್ಲಿ 22 ತಾತ್ಕಾಲಿಕ ಒತ್ತುವರಿ, ಅಯ್ಯಪ್ಪನಗರ ಮುಖ್ಯ ರಸ್ತೆಯಿಂದ ಹೂಡಿ ಮೇಲ್ಸೇತುವೆ ತನಕ 1.2 ಕಿ.ಮೀನಲ್ಲಿ 11 ತಾತ್ಕಾಲಿಕ ಒತ್ತುವರಿ, ಗರುಡಾಚಾರಿ ಪಾಳ್ಯ ಐಟಿಪಿಎಲ್ ಮುಖ್ಯ ರಸ್ತೆಯಿಂದ ಬಸವಣ್ಣನಗರ ತನಕದ 1.1 ಕಿ.ಮೀಯಲ್ಲಿ 9 ತಾತ್ಕಾಲಿಕ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.