ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಐಟಿ ಪ್ರವೇಶ ಪರೀಕ್ಷೆ 19 ರಿಂದ

Published 18 ಏಪ್ರಿಲ್ 2024, 15:22 IST
Last Updated 18 ಏಪ್ರಿಲ್ 2024, 15:22 IST
ಅಕ್ಷರ ಗಾತ್ರ

ಬೆಂಗಳೂರು: ವೆಲ್ಲೂರ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ವಿಐಟಿ) ಶಿಕ್ಷಣ ಸಂಸ್ಥೆಯು ದೇಶದ ವಿವಿಧ ರಾಜ್ಯಗಳಲ್ಲಿರುವ ಹಾಗೂ ವಿದೇಶಗಳಲ್ಲಿರುವ ತಮ್ಮ ಸಮೂಹ ಸಂಸ್ಥೆಗಳಲ್ಲಿ ಬಿ.ಟೆಕ್‌ ಪದವಿ ಪ್ರವೇಶಕ್ಕಾಗಿ ಇದೇ 19ರಿಂದ 30ರವರೆಗೆ ಪ್ರವೇಶ ಪರೀಕ್ಷೆ (ವಿಐಟಿಇಇಇ) ನಡೆಸುತ್ತಿದೆ.

ದೇಶದ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿರುವ ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಇದು ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಟಿ)ಯಾಗಿದೆ. ದೇಶದ 125 ನಗರಗಳ ಜೊತೆಗೆ, ದುಬೈ, ಮಸ್ಕತ್, ಕತಾರ್, ಕುವೈತ್, ಸಿಂಗಪುರ ಮತ್ತು ಮಲೇಷ್ಯಾದ ಕೌಲಾಲಂಪುರದಲ್ಲಿರುವ ಪ್ರವೇಶ ಪರೀಕ್ಷೆಗಳು ನಡೆಯಲಿವೆ. ಈ ಪರೀಕ್ಷೆಯ ಫಲಿತಾಂಶವು ಮೇ 3ರಂದು www.vit.ac.inನಲ್ಲಿ ಪ್ರಕಟವಾಗಲಿದೆ. ಅದೇ ದಿನ ಆನ್‌ಲೈನ್ ಕೌನ್ಸೆಲಿಂಗ್ ಪ್ರಕ್ರಿಯೆ ಪ್ರಾರಂಭವಾಗಲಿದೆ.

ವಿಐಟಿ ವೆಲ್ಲೂರು, ವಿಐಟಿ ಚೆನ್ನೈ, ವಿಐಟಿ ಆಂಧ್ರಪ್ರದೇಶ (ಅಮರಾವತಿ) ಹಾಗೂ ವಿಐಟಿ ಭೋಪಾಲ್‌ ಕ್ಯಾಂಪಸ್‌ನಲ್ಲಿ ಬಿ.ಟೆಕ್‌ ಪ್ರವೇಶಕ್ಕೆ ಕೌನ್ಸೆಲಿಂಗ್‌ ನಡೆಯಲಿದೆ.

ವಿಐಟಿ ಪ್ರವೇಶ ಪರೀಕ್ಷೆಯಲ್ಲಿ ಒಂದು ಲಕ್ಷದೊಳಗೆ ರ್‍ಯಾಂಕ್ ಪಡೆದವರು ಈ ಕೌನ್ಸೆಲಿಂಗ್‌ಗೆ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ. ಒಂದು ಲಕ್ಷ ಮೇಲ್ಪಟ್ಟು ರ್‍ಯಾಂಕ್ ಪಡೆದವರು ವಿಐಟಿ ಆಂಧ್ರಪ್ರದೇಶ ಮತ್ತು ವಿಐಟಿ ಭೋಪಾಲ್‌ನಲ್ಲಿ ಮಾತ್ರ ಪ್ರವೇಶಕ್ಕೆ ಅರ್ಹರಾಗಿರುತ್ತಾರೆ. ಅವರಿಗೆ ಜೂನ್ 20 ಮತ್ತು 21ರಂದು ಕೌನ್ಸೆಲಿಂಗ್ ಮಾಡಲಾಗುತ್ತದೆ. ತರಗತಿಗಳು ಜುಲೈ ಎರಡನೇ ವಾರದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಪ್ರಕಟಣೆ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT