ಬೆಂಗಳೂರು: ರಾಜ್ಯ ಕುಂಬಾರ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ‘ಕರ್ನಾಟಕ ರಾಜ್ಯ ಕುಂಬಾರರ ಕುಲಶಾಸ್ತ್ರೀಯ ಅಧ್ಯಯನ ವಿಚಾರ ಸಂಕಿರಣ ಹಾಗೂ ಅಭಿನಂದನಾ ಸಮಾರಂಭ’ವನ್ನು ಭಾನುವಾರ (ಆಗಸ್ಟ್ 11) ಆಯೋಜಿಸಲಾಗಿದೆ.
ಕೆ.ಆರ್. ವೃತ್ತದಲ್ಲಿರುವ ಎಂಜಿನಿಯರ್ ಭವನದಲ್ಲಿ ಕಾರ್ಯಕ್ರಮ ಬೆಳಿಗ್ಗೆ 10ಕ್ಕೆ ನಡೆಯಲಿದ್ದು, ಕುಂಬಾರರ ಕುಲಶಾಸ್ತ್ರೀಯ ಅಧ್ಯಯನ, ಕುಂಬಾರರ ಸಮಾಜಮುಖಿ ಸಂಶೋಧನೆ, ಕುಂಬಾರರ ಸಾಹಿತ್ಯ, ಕುಂಬಾರರ ಸಮುದಾಯದ ಸಂಘಟನೆ ಮತ್ತು ಪರಿವರ್ತನೆ ವಿಷಯಗಳ ಕುರಿತು ವಿಚಾರ ಸಂಕಿರಣ ಹಾಗೂ ಕವಿಗೋಷ್ಠಿ ನಡೆಯಲಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ಸರ್ವಜ್ಞ ಸಂಶೋಧನಾ ಪೀಠದ ಮಂಜಪ್ಪ ಶರಣರು, ಪ್ರಾಧ್ಯಾಪಕ ಕೆ.ಎಂ.ಮೇತ್ರಿ, ಕಾದಂಬರಿಕಾರ ಕುಂ.ವೀರಭದ್ರಪ್ಪ ವಿಷಯ ಮಂಡಿಸಲಿದ್ದಾರೆ.
ತೆಲಸಂಗದ ಕುಂಬಾರ ಗುಂಡಯ್ಯ ಮಹಾಸಂಸ್ಥಾನ ಮಠದ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ಚಿತ್ರದುರ್ಗದ ಕುಂಬಾರ ಗುಂಡಯ್ಯ ಮಹಾಸಂಸ್ಥಾನ ಮಠದ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಮತ್ತು ಗೂನಳ್ಳಿಯ ದತ್ತ ಧಾರ್ಮಿಕ ಕ್ಷೇತ್ರದ ಮಹಾರಾಜ್ ಆಶ್ರಮದ ಸದ್ಗುರು ಶಂಕರದತ್ತ ಅವರು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಆರ್.ಶ್ರೀನಿವಾಸ್ ಹಾಗೂ ಅಧ್ಯಕ್ಷ ಬಾಬು ಶಂಕರಪ್ಪ ಕುಂಬಾರ ತಿಳಿಸಿದ್ದಾರೆ.